More

    ಕೃಷಿ ಕ್ಷೇತ್ರದ ಸುಧಾರಣೆಗೆ ತಿದ್ದುಪಡಿ ಕಾಯ್ದೆಗಳು ಸಹಕಾರಿ; ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಿ. ವೆಂಕಟೇಶ್ವರರಾವ್ ಬಣ್ಣನೆ

    ಮಸ್ಕಿ: ರೈತರ ಕಲ್ಯಾಣ, ಕೃಷಿ ಕ್ಷೇತ್ರದ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮಹತ್ವ ಹೆಜ್ಜೆಯನ್ನಿಟ್ಟಿದ್ದಾರೆ. ಇದರಿಂದ ಎಲ್ಲ ರೈತರಿಗೆ ಅನೂಕೂಲವಾಗಲಿದೆ ಎಂದು ತಾಲೂಕು ರೈತ ಮೋರ್ಚಾ ಅಧ್ಯಕ್ಷ ಜಿ. ವೆಂಕಟೇಶ್ವರರಾವ್ ಹೇಳಿದರು.

    ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಕೃಷಿಕರ ಮತ್ತು ಕೃಷಿ ಸುಧಾರಣೆಗಾಗಿ ಮಹತ್ವದ ಎರಡು ಮಸೂದೆಗಳನ್ನು ತಿದ್ದುಪಡಿ ಮಾಡಿದೆ. ನೂತನ ಮಸೂದೆಗಳಿಂದ ರೈತರು ತಮಗೆ ಇಷ್ಟ ಬಂದ ಕಡೆ ಹೆಚ್ಚಿನ ಬೆಲೆಗೆ ಧಾನ್ಯಗಳನ್ನು ಮಾರಾಟ ಮಾಡುವ ಅವಕಾಶವಿದೆ. ಇದರಿಂದ ರೈತರಿಗೆ ವರದಾನವಾಗಲಿದೆ. ಆದರೆ, ವಿರೋಧ ಪಕ್ಷಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ. ಈ ಮಸೂದೆಯಲ್ಲಿ ಕೃಷಿ ಉತ್ಪನ್ನಗಳ ಪಾರದರ್ಶಕತೆ ಹಾಗೂ ತಡೆರಹಿತ ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತೇಜನ ನೀಡಲಾಗಿದೆ. ಅಲ್ಲದೆ ಕೃಷಿ ಉತ್ಪನ್ನಗಳು ನ್ಯಾಯಯುತ ದರ ಚೌಕಟ್ಟಿನೊಳಗೆ ಮಾರಾಟ ಮಾಡಬಹುದು. ಈ ಎರಡು ಕಾಯ್ದೆಗಳು ದೇಶದಲ್ಲಿ ಕ್ರಾಂತಿ ತರಲಿವೆ ಎಂದರು.

    ಮಸ್ಕಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಚೇತನ್‌ಪಾಟೀಲ್, ವಿಶ್ವನಾಥ ಮಸ್ಕಿ, ಮಲ್ಲಿಕಾರ್ಜುನ ಬೈಲಗುಡ್ಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts