More

    ಸೇತುವೆ ಮೇಲೆ ಕಾರು ಪಾರ್ಕ್​ ಮಾಡಿ ನದಿಗೆ ಜಿಗಿದು ಕೃಷಿ ಅಧಿಕಾರಿ ಆತ್ಮಹತ್ಯೆ..!

    ಹೈದರಾಬಾದ್​: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮಹಿಳಾ ಕೃಷಿ ಅಧಿಕಾರಿಯೊಬ್ಬರು ಗುರುವಾರ ಮಂಜಿರಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಅಧಿಕಾರಿಯನ್ನು ಅರುಣಾ ಎಂದು ಗುರುತಿಸಲಾಗಿದೆ. ಸಂಗಾರೆಡ್ಡಿಯ ರೈತರ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಮನೊರ್​ ಮಂಡಲದಲ್ಲಿ ಮಂಜಿರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮೇಲೆ ತಮ್ಮ ಕಾರು ಪಾರ್ಕ್​ ಮಾಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಚಾಲಕನಿಗೆ ಲೋ ಬಿಪಿ; ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು..!

    ನಾಪತ್ತೆಯಾಗಿರುವ ಅರುಣಾರಿಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಅಧಿಕಾರಿಯ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಇನ್ನೇನು ಮೃತದೇಹ ಶವಗಾರದಲ್ಲಿಡಬೇಕು ಅಷ್ಟರಲ್ಲಿ ದಿಢೀರನೆ ಎದ್ದು ಕುಳಿತು ಕಣ್ಣೀರಿಟ್ಟ ಸತ್ತ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts