More

    ರೈತ ವಾಸ್ತವ್ಯಕ್ಕೆ ಮುಂದಾದ ಕೃಷಿ ಸಚಿವ ಬಿ.ಸಿ. ಪಾಟೀಲ್; ಪ್ರಗತಿಪರ ಕೃಷಿಕರ ಜತೆ ಚರ್ಚೆ

    ಬೆಂಗಳೂರು: ಕೃಷಿ ಸಚಿವ ಬಿ.ಸಿ. ಪಾಟೀಲ್​ ರೈತರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಹೊಸದೊಂದು ಯೋಜನೆ ರೂಪಿಸಿದ್ದಾರೆ.

    ಕರೊನಾ ಸಂಕಷ್ಟದ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ತೊಂದರೆಯಾಗದಂತೆ ಸೂಕ್ತಕ್ರಮಗಳನ್ನು ಕೈಗೊಂಡು ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಾಗುವಂತೆ ಮಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

    ಇದನ್ನೂ ಓದಿ; ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ 

    ರೈತಾಪಿ ಕುಟುಂಬದಿಂದ ಬಂದಿರುವ ಸ್ವತಃ ಕೃಷಿಕರೂ ಆಗಿರುವ ಬಿ.ಸಿ. ಪಾಟೀಲ್​ ಅನ್ನದಾತನ ಕಷ್ಟನಷ್ಟಗಳನ್ನು ಹತ್ತಿರದಿಂದ ಅರಿತಿದ್ದಾರೆ. ಸದಾ ರೈತರ ಬಗ್ಗೆ ಕಾಳಜಿ ಇತ್ತೀಚೆಗೆ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ನವೀನ‌ ಬದಲಾವಣೆ ಪ್ರಗತಿಗೆ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿರುವ ಸಚಿವರು ಇದೀಗ ರೈತರೊಂದಿಗೆ ಕಾಲಕಳೆಯಲು ನಿರ್ಧರಿಸಿದ್ದಾರೆ.

    “ರೈತ ವಾಸ್ತವ್ಯ” ಹಮ್ಮಿಕೊಳ್ಳಲು ಬಿ.ಸಿ. ಪಾಟೀಲ್​ ಮುಂದಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟ ಪೂರ್ಣವಾದ ಬಳಿಕ ಈ ಯೋಜನೆಗೆ ಚಾಲನೆ ದೊರೆಯಲಿದೆ.
    ಕೃಷಿ ಅಧಿಕಾರಿಗಳ ಜತೆ ಪ್ರಗತಿಪರ ರೈತರನ್ನು ಭೇಟಿಮಾಡಿ ರೈತರ ನಿವಾಸದಲ್ಲಿ ವಾಸ್ತವ್ಯ ಹೂಡುವುದು, ರೈತರ ಜತೆಗೆ ಚರ್ಚೆ, ಪ್ರಗತಿಪರ ರೈತರ ಸಾಧನೆಗಳನ್ನು ಇತರ ರೈತರಿಗೂ ಪ್ರೇರಣೆಯಾಗಿಸುವುದು ಸೇರಿ ಕೃಷಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಕರೊನಾ ಸೋಂಕು ಕಡಿಮೆಯಾದ ಬಳಿಕ ರೈತ ವಾಸ್ತವ್ಯಕ್ಕೆ ರೂಪುರೇಷೆ, ಸ್ಥಳ ಮತ್ತು ದಿನಾಂಕ ನಿಗದಿಯಾಗಲಿದೆ.

    ಪಾರ್ಕ್​ನಲ್ಲಿ ಕಿರಿಕ್​ ನಟಿಯ ‘ತುಂಡುಡುಗೆ’ ಕಸರತ್ತು; ಉದ್ಯಾನದಲ್ಲೇ ಲಾಕ್​ ಮಾಡಿದ ಸಾರ್ವಜನಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts