More

    ವಿಜಯವಾಣಿ ಮೇಳದಲ್ಲಿ ದೇಸಿ ಕ್ರೀಡೆಗಳ ಮೆರುಗು: ರಾಗಿ ಬೀಸಿ ಪ್ರಶಸ್ತಿ ಗೆಲ್ಲಿ, ಅಳಿಗುಳಿ ಮಣೆ, ಕಟ್ಟೆಮಣೆ ಆಡಿ ಚಮತ್ಕಾರ ತೋರಿಸಿ

    ಮಂಡ್ಯ: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ನ್ಯೂಸ್ ಫೆ.21ರಿಂದ 23ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ದೇಸಿ ಕ್ರೀಡೆಗಳನ್ನು ಏರ್ಪಡಿಸಲಾಗುತ್ತಿದೆ.

    ಆಧುನಿಕತೆಯ ವೇಗದಲ್ಲಿ ಮರೆತುಹೋಗಿರುವ ಹಲವು ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳು ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುತ್ತಿದ್ದವು. ಆದರೀಗ ಎಲ್ಲರೂ ಟಿವಿ, ಮೊಬೈಲ್​ನಲ್ಲಿ ಮುಳುಗಿ ಹೋಗುತ್ತಿರುವ ಪರಿಣಾಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕೃಷಿ ಜತೆಗೆ ಮನರಂಜನೆಗಾಗಿ ನಮ್ಮ ಗ್ರಾಮೀಣರು ಆಡುತ್ತಿದ್ದ ಕ್ರೀಡೆಗಳನ್ನು ಇಂದು ಹಲವರು ಮರತೇ ಹೋಗಿದ್ದಾರೆ. ಕ್ರೀಡೆಗಳಿಂದ ಸಿಗುವ ಆನಂದ, ಸ್ಪೂರ್ತಿ, ಮಾನಸಿಕ ಸ್ಥೈರ್ಯ ಇಂದಿನ ಯುವಜನತೆಗೆ ಗೊತ್ತಿಲ್ಲ. ಅದರ ಕರಾಮತ್ತು ತೋರಿಸುವ ಸಲುವಾಗಿ ಕೃಷಿ ಮೇಳದಲ್ಲಿ ಗ್ರಾಮೀಣ ಸೊಗಡಿನ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ.

    ರಾಗಿ ಬೀಸುವ ಸ್ಪರ್ಧೆಯನ್ನು ಮಂಡ್ಯ ತಾಲೂಕಿನ ಕೆ.ಗೌಡಗೆರೆಯ ಸಾವಯವ ರೈತಕೂಟ, ಗ್ರಾಮೀಣ ಕ್ರೀಡೆಗಳನ್ನು ಆಬಲವಾಡಿ ರಾಹುಲ್ ದ್ರಾವಿಡ್ ಕ್ರೀಡಾಬಳಗದ ಅನಿಲ್​ಕುಮಾರ್, ಅನನ್ಯ ಹಾರ್ಟ್ಸ್​ನ ಬಿ.ಎಸ್.ಅನುಪಮಾ ಹಾಗೂ ನೆಲದನಿ ಬಳಗದ ಲಂಕೇಶ್ ಸಹಯೋಗದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿದೆ.

    ಫೆ.21ರಂದು ಮಧ್ಯಾಹ್ನ 3 ಗಂಟೆಗೆ ಹೊರಾಂಗಣ ವೇದಿಕೆಯಲ್ಲಿ ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಕುಂಟಾಬಿಲ್ಲೆ, ಕಟ್ಟೆಮಣೆ, ಅಳಿಗುಳಿಮಣೆ ಆಟ, ಕೂಸುಮರಿ, ಒಂಟಿ ಕಾಲಿನ ಓಟ, ಮಡಕೆ ಒಡೆಯುವ ಸ್ಪರ್ಧೆ, ಗೋಣಿಚೀಲದ ಓಟದ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

    22ರಂದು ಬೆಳಗ್ಗೆ 10 ಗಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ರಾಗಿ ಬೀಸುವ ಸ್ಪರ್ಧೆ ಸೇರಿ ಹಲವು ದೇಸಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಪುರುಷರಿಗಾಗಿ ಮೂಟೆ ಹೊರುವ ಸ್ಪರ್ಧೆ, ಲಗೋರಿ, ಗೋಲಿ, ಬುಗುರಿ, ಹುಲಿಕುರಿ ಆಟ, ಹಗ್ಗಜಗ್ಗಾಟ, ಗೋಣಿ ಚೀಲದ ಓಟ, ತೆಂಗಿನ ಗರಿಯ ಮೇಲೆ ಮಕ್ಕಳನ್ನು ಕೂರಿಸಿ ಎಳೆಯುವ ಸ್ಪರ್ಧೆ, ಕುದುರೆ ಓಟ ಸೇರಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

    23ರಂದು ಬೆಳಗ್ಗೆ 10 ಗಂಟೆಗೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ರಾಗಿಮುದ್ದೆ, ಕಡ್ಲೆಪುರಿ, ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಇರಲಿದೆ. ಪಾಲ್ಗೊಳ್ಳುವವರು ಮಾಹಿತಿಗಾಗಿ ಮೊಬೈಲ್

    ನಂ- 8884432053, 8884431970, 9902455242, 9686008879, 9620174111 ಸಂರ್ಪಸಬಹುದು.

    ವಿದ್ಯಾರ್ಥಿನಿಯರ ಕೋಲಾಟ

    ಫೆ.21ರಂದು ಕೃಷಿ ಮೇಳ ಉದ್ಘಾಟನೆಯಂದು ಮಂಡ್ಯ ತಾಲೂಕಿನ ಸಂತೆಕಸಲಗೆರೆಯ ಮಂಜು ಅವರಿಂದ ತರಬೇತಿ ಪಡೆದಿರುವ ವಿದ್ಯಾರ್ಥಿನಿಯರು ಜಡೆ ಕೋಲಾಟ ಪ್ರದರ್ಶನ ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts