More

    ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ವಿರೋಧ

    ವಿಜಯವಾಣಿ ಸುದ್ದಿಜಾಲ ಹೊಸೂರು
    ನಗರ ಸಮೀಪದಲ್ಲಿ ಜನವಸತಿ ಪ್ರದೇಶದಲ್ಲಿ ಗೇಲ್ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ವಿರೋಧಿಸಿ ವೆಂಕಟೇಶ್ವರ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
    ಗೇಲ್ ಸಂಸ್ಥೆ ಕೇರಳದಿಂದ ತಮಿಳುನಾಡು ಮಾರ್ಗವಾಗಿ ಕರ್ನಾಟಕಕ್ಕೆ ಪೈಪ್‌ಲೈನ್ ಮೂಲಕ ಅನಿಲ ಸಾಗಿಸಲು ಕಾಮಗಾರಿ ಕೈಗೊಂಡಿದೆ. ತಮಿಳುನಾಡಿನ ಹೊಸೂರು ಸಮೀಪದ ರಾಯಕೋಟ್ಟೈ, ಕೆಳಮಂಗಲ ಮತ್ತಿತರ ಪ್ರದೇಶಗಳಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾರ್ಯದಲ್ಲಿ ಕಂಪನಿ ನಿರತವಾಗಿದೆ. ನಾಗೊಂಡಪಲ್ಲಿ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ವರ ನಗರದ ಜನವಸತಿ ಪ್ರದೇಶದಲ್ಲಿ ಪೈಪ್ ಲೇನ್ ಕಾಮಗಾರಿ ನಡೆಸಲು ಪೈಪ್ ಮತ್ತು ಸಲಕರಣೆಗಳನ್ನು ಇರಿಸಲಾಗಿದೆ. ಈ ಹಿಂದೆಯೇ ಕಾಮಗಾರಿ ಕೈಗೊಳ್ಳದಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು. ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಮಾಡಿದರೆ ನಾವು ಭಯದಲ್ಲಿ ಬದುಕಬೇಕಾಗುತ್ತದೆ. ವಸತಿ ಪ್ರದೇಶದ ನಡುವೆ ಕಾಮಗಾರಿ ನಡೆಸಕೂಡದು ಎಂದು ಒತ್ತಾಯಿಸಿ ಹೊಸೂರು ಉಪ ಜಿಲ್ಲಾಧಿಕಾರಿಯವರು ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ, ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ 200 ಕ್ಕೂ ಹೆಚ್ಚು ಕುಟುಂಬಗಳು ಹಾಗೂ ಸಾರ್ವಜನಿಕರೊಂದಿಗೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಶಿವಪ್ರಕಾಶ್, ಸಂಪಂಗಿ ರಾಮಯ್ಯ, ಜಯಮ್ಮ, ಶಿವಕುಮಾರ್, ನಾಗರಾಜ್ ರೆಡ್ಡಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts