More

    ಮತ್ತೆ ಶುರುವಾದ ಖಾತೆ ಕ್ಯಾತೆ: ಸಂಪುಟ ಸಭೆಗೂ ಬರದ ಸಚಿವರು; ಸ್ಫೋಟಿಸುವುದೇ ಭಿನ್ನಮತ?

    ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಬೆನ್ನಿಗೇ ಮತ್ತೊಮ್ಮೆ ಖಾತೆ ಕ್ಯಾತೆ ಶುರುವಾಗಿದ್ದು, ಅಸಂತುಷ್ಟ ಸಚಿವರು ಸಂಪುಟ ಸಭೆಗೂ ಗೈರಾಗಿ ಅಸಮಾಧಾನ ವ್ಯಕ್ತಪಡಿಸಿದ ಸನ್ನಿವೇಶ ಸೃಷ್ಟಿಯಾಗಿದೆ. ಈ ನಡುವೆ ಕಮಲ ಪಕ್ಷದಲ್ಲಿ ಬಣ ರಾಜಕೀಯ ಉಂಟಾಗುವ ಸಾಧ್ಯತೆಗಳು ಕಾಣಿಸಿದ್ದು, ಮತ್ತೊಮ್ಮೆ ಭಿನ್ನಮತ ಆಸ್ಫೋಟಗೊಂಡರೂ ಅಚ್ಚರಿ ಇಲ್ಲ ಎಂಬಂತಾಗಿದೆ.

    ಖಾತೆ ಮರುಹಂಚಿಕೆಯಿಂದ ಅಸಮಾಧಾನಗೊಂಡ ಏಳು ಸಚಿವರು ಇಂದು ಸಂಪುಟ ಸಭೆಗೆ ಗೈರಾಗಿದ್ದರು. ಆರ್​. ಅಶೋಕ್ ಕರೆ ಮಾಡಿ ಆಹ್ವಾನಿಸಿದರೂ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್​, ಗೋಪಾಲಯ್ಯ ಹಾಗೂ ಮಾಧುಸ್ವಾಮಿ ಅವರು ಸಭೆಗೆ ಆಗಮಿಸಲಿಲ್ಲ. ಸಂಪುಟ ಸಭೆಗೆ ಗೈರಾಗುವ ಮೂಲಕ ಅವರು ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಇನ್ನು ಅಸಂತುಷ್ಟರಲ್ಲಿ ವಲಸಿಗರೇ ಪ್ರಮುಖವಾಗಿ ಇರುವುದು ರಾಜ್ಯ ರಾಜಕೀಯದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.

    ಇದನ್ನೂ ಓದಿ: ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಪುಟ ಸಭೆಯ ನಡುವೆಯೇ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಸಚಿವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದ್ದಾರೆ. ಖಾತೆ ಮರು ಹಂಚಿಕೆಯಿಂದ ಕೆಲವರಿಗೆ ಅಸಮಾಧಾನ ಆಗಿದೆ. ಆದರೆ ಯಾರೂ ಬೇಸರ ಮಾಡಿಕೊಳ್ಳುವುದು ಬೇಡ. ಕೆಲವರಲ್ಲಿದ್ದ ಖಾತೆ ಪಡೆದು, ಅದನ್ನು ಬೇರೆಯವರಿಗೆ ಹಂಚಿಕೆ ಮಾಡಿದ್ದು ಅನಿವಾರ್ಯ ಎಂದರು. . ಖಾತೆ ವಿಚಾರವಾಗಿ ಮರು ಹಂಚಿಕೆ ಮಾಡಿಕೊಡುವೆ. ಯಾರೂ ಆ ಬಗ್ಗೆ ಮಾಧ್ಯಮಗಳಿಗೆ ಮಾತನಾಡದಂತೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.

    ಸದ್ಯ ಯಾರೂ ಬೇಸರ ಮಾಡಿಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ನಿಮಗೆ ಬೇರೆ ಖಾತೆಗಳು ಸಿಗಲಿವೆ. ಈಗ ಕೊಟ್ಟಿರುವ ಖಾತೆಗಳಲ್ಲಿ ಚೆನ್ನಾಗಿ ಕೆಲಸ ಮಾಡಿ. ಈ ಮೂಲಕ ನಾವು ನೀವು ಎಲ್ಲ ಸೇರಿ ಒಟ್ಟಾಗಿ ಕೆಲಸ ಮಾಡೋಣ. ಕೆಲವೇ ದಿನಗಳಲ್ಲಿ ಬಜೆಟ್ ಪೂರ್ವಭಾವಿ ಸಭೆ ಮಾಡಬೇಕು. ಕೂಡಲೇ ತಮಗೆ ಕೊಟ್ಟಿರುವ ಖಾತೆಗಳ ಜವಾಬ್ದಾರಿ ತೆಗೆದುಕೊಳ್ಳಿ. ಇಲಾಖೆಗಳ ಕಾರ್ಯಗಳ ಪರಿಶೀಲನೆ ನಡೆಸಿ ಎಂದು ಸಿಎಂ ಹೇಳಿದರು.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಬಜೆಟ್​ನಲ್ಲಿ ಯಾವ್ಯಾವ ಕಾರ್ಯಕ್ರಮ ಜಾರಿಗೆ ತರಬೇಕು ಎಂಬುದನ್ನು ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ನಾನು ತೀರ್ಮಾನ ಮಾಡುತ್ತೇನೆ. ಈ ಮೂಲಕ ರಾಜ್ಯದ ಜನತೆಗೆ ಒಳ್ಳೆಯ ಬಜೆಟ್ ಕೊಡೋಣ ಎಂದರಲ್ಲದೆ, ಮುಂದೆ ವಿಧಾನಮಂಡಲ ಅಧಿವೇಶನ ಬೇರೆ ಬರುತ್ತಿದೆ. ಹೀಗಾಗಿ ನಾವೆಲ್ಲರೂ ಸಜ್ಜಾಗೋಣ ಎಂದು ಸೂಚಿಸಿದರು.

    ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

    ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts