More

    ಮತ್ತೆ 36 ಜನರಲ್ಲಿ ವೈರಸ್ ಪತ್ತೆ

    ಬೆಳಗಾವಿ: ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿರುವ ಮಹಾಮಾರಿ ಕರೊನಾ ವೈರಸ್, ಶುಕ್ರವಾರ ಮತ್ತೆ 36 ಜನರಿಗೆ ವಕ್ಕರಿಸಿದೆ. ಸೋಂಕಿತರಲ್ಲಿ 34 ಜನರು ಮಹಾರಾಷ್ಟ್ರದಿಂದ, ಇಬ್ಬರು ಹರಿಯಾಣದಿಂದ ಬಂದವರಾಗಿದ್ದಾರೆ.

    ಈ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 252ಕ್ಕೆ ಏರಿಕೆಯಾಗಿದೆ. ಸೋಂಕಿತರೆಲ್ಲ ಬೆಳಗಾವಿ ತಾಲೂಕಿನ ಹೊನಗಾ, ಬಂಬರಗಾ, ಕೇದನೂರು, ವಂಟಮೂರಿ ಹಾಗೂ ಸವದತ್ತಿ ತಾಲೂಕಿನವರಾಗಿದ್ದಾರೆ. ಇವರಲ್ಲಿ 2 ಮತ್ತು 9 ವರ್ಷದ ಇಬ್ಬರು ಹೆಣ್ಣು ಮಕ್ಕಳು, 5 ಮತ್ತು 9 ವರ್ಷದ ಬಾಲಕರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿರುವುದಕ್ಕೆ ಜನರು ಸ್ವಲ್ಪ ನಿರಾಳರಾಗಿದ್ದರು. ಆದರೆ, ಈಗ ಮತ್ತೆ ಹೊಸ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts