More

    12ಕ್ಕೂ ಹೆಚ್ಚು ದೇಶಗಳು ಎದುರಿಸುತ್ತಿವೆ ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾ ಸ್ಥಿತಿ ಈ ರಾಷ್ಟ್ರಗಳಿಗೂ ಬರಲಿದೆಯೇ? ಇಲ್ಲಿದೆ ವಿವರ

    ನವದೆಹಲಿ: ಸದ್ಯ ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದ ಅರ್ಥ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದ್ದು, ಇದೇ ಹಾದಿಯಲ್ಲಿರುವ 12ಕ್ಕೂ ಹೆಚ್ಚು ರಾಷ್ಟ್ರಗಳ ಕುರಿತ ಆರ್ಥಿಕ ಸ್ಥಿತಿಗತಿ ಕುರಿತು ವಿಶ್ಲೇಷಿಸಲಾಗಿದೆ.

    ಸದ್ಯ ಶ್ರೀಲಂಕಾ ಸ್ಥಿತಿ ಬೇರಾವ ದೇಶಕ್ಕೂ ಬಾರದಿರಲಿ ಎಂದು ಇತರೆ ರಾಷ್ಟ್ರಗಳು ಎಂದುಕೊಳ್ಳುತ್ತಿರುವಾಗಲೇ ವಿಶ್ವ ಹಣಕಾಸು ನೀಡಿರುವ ಮಾಹಿತಿ ಬೆಚ್ಚಿಬೀಳಿಸುವಂತಿದೆ.

    ಯೂಕ್ರೇನ್​, ಲೆಬನಾನ್​​, ರಷ್ಯಾ, ಸುರಿನಾಮ್​​, ಜಾಂಬಿಯಾ, ಈಜಿಪ್ಟ್​ ಮತ್ತು ಘಾನಾ ರಾಷ್ಟ್ರಗಳು ಈಗಾಗಲೇ ಶ್ರೀಲಂಕಾದ ಹಾದಿಯಲ್ಲಿವೆ. ಹೆಚ್ಚುತ್ತಿರುವ ಸಾಲದ ವೆಚ್ಚಗಳು, ಹಣದುಬ್ಬರ ಮತ್ತು ಸಾಲಗಳಿಂದಾಗಿ ಆರ್ಥಿಕ ಕುಸಿತದ ಅಪಾಯದಲ್ಲಿವೆ.

    ಅರ್ಜೆಂಟಿನಾವು 150ಡಾಲರ್​ ಮಿಲಿಯನ್​​ ಸಾಲ ಹೊಂದಿದ್ದು, ನಂತರದ ಸ್ಥಾನದಲ್ಲಿ ಈಕ್ವೇಡಾರ್​​ ಮತ್ತು ಈಜಿಪ್ಟ್​ ಕ್ರಮವಾಗಿ 40 ಬಿಲಿಯನ್​ ಡಾಲರ್​ ಮತ್ತು 45 ಬಿಲಿಯನ್​ ಡಾಲರ್​​​ ಸಾಲದ ಹೊರೆ ಇದೆ.

    ಇನ್ನು ಯೂಕ್ರೇನ್​​ ಹಾಗೂ ರಷ್ಯಾ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ. ಯೂಕ್ರೇನ್​ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ಕೂಡ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಇದು ಹೀಗೆ ಮುಂದುವರಿದರೆ ಆರ್ಥಿಕ ದಿವಾಳಿಯಾಗಲು ಬಹುಕಾಲ ಬೇಕಿಲ್ಲ ಎನ್ನಲಾಗಿದೆ. ಆಫ್ರಿಕಾ ರಾಷ್ಟ್ರಗಳ ಪೈಕಿ ಟ್ಯುನಿಶಿಯಾ ಅತಿ ಹೆಚ್ಚು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ವಿಶ್ವ ಹಣಕಾಸು ನಿಧಿ ತಿಳಿಸಿದೆ. (ಏಜೆನ್ಸೀಸ್​)

    VIDEO: ದೆಹಲಿ ಮೆಟ್ರೋದಲ್ಲಿ ಯುವಕನಿಗೆ ಯುವತಿಯಿಂದ ಕಪಾಳಮೋಕ್ಷ! ಪ್ರಯಾಣಿಕರಿಗೆ ಉಚಿತ ಮನರಂಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts