More

    ‘ಪುಷ್ಪ 2’ ನಂತರ ಮತ್ತೋರ್ವ ಸ್ಟಾರ್ ಹೀರೋ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಶ್ರೀಲೀಲಾ ಹೀಗೆ ಹೇಳ್ಬಿಟ್ರು!

    ಆಂಧ್ರಪ್ರದೇಶ: ಶ್ರೀಲೀಲಾ ಟಾಲಿವುಡ್‌ನಲ್ಲಿ ಕಳೆದ ವರ್ಷ ಸುಮಾರು ಅರ್ಧ ಡಜನ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಪೈಕಿ ಭಗವಂತ ಕೇಸರಿ ಉತ್ತಮ ಯಶಸ್ಸು ಕಂಡಿದೆ. ಸ್ಕಂದ ಸಿನಿಮಾ ಓಕೆ ಆಗಿದ್ದರೂ ಉಳಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇನ್ನು 2024ರ ಆರಂಭದಲ್ಲಿ ತೆರೆಕಂಡ ಗುಂಟೂರ್‌ ಕಾರಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಗಳಿಸುವಲ್ಲಿ ವಿಫಲವಾಗಿದೆ. ಸತತ ಸೋಲುಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಶ್ರೀಲೀಲಾ ಸಿನಿಮಾಗಳಿಗೆ ಕೊಂಚ ಬ್ರೇಕ್ ನೀಡುವ ನಿರೀಕ್ಷೆ ಇದೆ. ಶ್ರೀಲೀಲಾ ಅವರಿಗೆ ಹಲವಾರು ಅವಕಾಶಗಳು ಬಾಗಿಲನ್ನು ತಟ್ಟುತ್ತಿದ್ದು, ಕ್ರೇಜಿ ಆಫರ್ ಬಂದರೂ ಬೇಡ ಅಂದಿದ್ದಾರಂತೆ.

    ಹೌದು, ಕೆಲವು ದಿನಗಳ ಹಿಂದೆ ಶ್ರೀಲೀಲಾ ಅವರಿಗೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರತಂಡದಿಂದ ಆಫರ್ ಬಂದಿತ್ತು. ಸ್ಪೆಷಲ್ ಸಾಂಗ್ ಮಾಡಲು ಚಿತ್ರತಂಡ ಅವರನ್ನು ಸಂಪರ್ಕಿಸಿದೆ. ಇದಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ನೀಡಲು ಮುಂದಾಗಿದೆ. ಆದರೆ, ಆ ಹಾಡನ್ನು ಮಾಡಲು ಸಾಧ್ಯವಿಲ್ಲ ಎಂದು ಶ್ರೀಲೀಲಾ ಹೇಳಿದ್ದಾರೆ. ಇತ್ತೀಚೆಗಷ್ಟೇ ಮತ್ತೊರ್ವ ಸ್ಟಾರ್ ಹೀರೋ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್​​​ಗೆ ಹೆಜ್ಜೆ ಹಾಕುವ ಅವಕಾಶ ಪಡೆದಿದ್ದಾರೆ. ಈ ಹಾಡನ್ನೂ ಕೂಡ ಮಾಡಲಾರೆ ಎಂದಿದ್ದಾರೆ ಈ ಬ್ಯೂಟಿ .

    ಹೀರೋಯಿನ್ ಆಗಿ ಒಳ್ಳೆ ಸ್ವಿಂಗ್ ನಲ್ಲಿರುವ ತಾನು ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕಿದರೆ ಮುಂದಿನ ಅವಕಾಶಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ ಶ್ರೀಲೀಲಾ. ಹಣಕ್ಕಾಗಿ ವಿಶೇಷ ಗೀತೆಗಳಿಗೆ ಹೆಜ್ಜೆ ಹಾಕಿದರೆ ಕೆರಿಯರ್‌ಗೆ ತೊಂದರೆಯಾಗಬಹುದು ಎಂಬುದು ಶ್ರೀಲೀಲಾ ಅವರ ಅನಿಸಿಕೆ.

    ಶ್ರೀಲೀಲಾ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಮುಂದುವರಿದರೂ ಓದನ್ನು ಕಡೆಗಣಿಸುತ್ತಿಲ್ಲ. ಚಲನಚಿತ್ರ ಮತ್ತು ಅಧ್ಯಯನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಸದ್ಯ ಶ್ರೀಲೀಲಾ ಎಂಬಿಬಿಎಸ್ ಓದುತ್ತಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ತಯಾರಿಯಲ್ಲಿ ನಿರತರಾಗುತ್ತಿದ್ದಾರೆ. ಹೀಗಾಗಿ ನಟನೆಗೆ ಕೆಲ ದಿನಗಳ ಕಾಲ ಬ್ರೇಕ್ ಬೀಳಲಿದೆ. ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಮಾತ್ರ ಪೂರ್ಣಗೊಳಿಸುವುದಾಗಿ ಈ ಹಿಂದೆ ಅವರು ಒಪ್ಪಿಕೊಂಡಿದ್ದಾರೆ. ಆ ನಂತರ ಶಿಕ್ಷಣದ ಕಡೆ ಗಮನ ಹರಿಸಲಾಗುವುದು.

    ಶ್ರೀಲೀಲಾ ಕೊನೆಯದಾಗಿ ಗುಂಟೂರ್‌ ಕಾರಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರ ಕಾಂಬಿನೇಷನ್​​​ನ ಈ ಫ್ಯಾಮಿಲಿ ಎಂಟರ್ಟೈನರ್ ನಿರೀಕ್ಷಿತ ಯಶಸ್ಸನ್ನು ತಲುಪಲಿಲ್ಲ. ಸಂಕ್ರಾಂತಿ ಉಡುಗೊರೆಯಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಈ ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಈ 5 ಫೋಟೋಗಳಲ್ಲಿ ಥೇಟ್​ ಅಮ್ಮನಂತೆ ಕಾಣ್ತಾರೆ ಜಾನ್ವಿ ಕಪೂರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts