More

    ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದ ಟೀಮ್ ಇಂಡಿಯಾಗೆ ತಲೆನೋವಾದ ಟ್ರಾವಿಸ್ ಹೆಡ್

    ಅಹಮದಾಬಾದ್: ಸತತ ಹತ್ತು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿದ್ದ ಟೀಮ್ ಇಂಡಿಯಾ, ತವರಿನಲ್ಲಿ 12 ವರ್ಷಗಳ ಬಳಿಕ ಐಸಿಸಿ ಏಕದಿನ ವಿಶ್ವಕಪ್ ಜಯಿಸುವ ಸನಿಹದಲ್ಲಿ ಎಡವಿ ಕನಸು ಭಗ್ನಗೊಳಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (137 ರನ್, 120 ಎಸೆತ, 15 ಬೌಂಡರಿ, 4 ಸಿಕ್ಸರ್) ಅಬ್ಬರದ ಶತಕದ ಎದುರು ಲಯ ತಪ್ಪಿದ ಭಾರತ ತಂಡ ಆಸ್ಟ್ರೇಲಿಯಾ ತಂಡ ಎದುರು 6 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಟೀಮ್ ಇಂಡಿಯಾದ ಕಳೆದೊಂದು ದಶಕದ ಐಸಿಸಿ ಟ್ರೋಫಿ ಬರ ಮುಂದುವರಿದಿದೆ. ರೋಹಿತ್ ಶರ್ಮ ಪಡೆಯ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಆಸ್ಟ್ರೇಲಿಯಾ ತಂಡ ದಾಖಲೆಯ 6ನೇ ಬಾರಿಗೆ ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಎನಿಸಿಕೊಂಡಿದೆ. ಜತೆಗೆ ಒಂದೇ ವರ್ಷದಲ್ಲಿ ಮತ್ತು ಏಕಕಾಲದಲ್ಲಿ ಟೆಸ್ಟ್-ಏಕದಿನದಲ್ಲಿ ವಿಶ್ವ ಕಿರೀಟ ಗೆದ್ದ ವಿಶಿಷ್ಟ ಸಾಧನೆ ಮಾಡಿದೆ.
    1.32 ಲಕ್ಷ ಪ್ರೇಕ್ಷಕರ ಎದುರು ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕ ರೋಹಿತ್ ಶರ್ಮ ಬಿರುಸಿನ ಆರಂಭ ಒದಗಿಸಿದರೂ, ನಂತರ ಅದೇ ಲಯದಲ್ಲಿ ಮುಂದುವರಿಯಲು ವಿಲವಾದ ಭಾರತ ತಂಡ, ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (66 ರನ್, 107 ಎಸೆತ, 1 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ (54 ರನ್, 63 ಎಸೆತ, 4 ಬೌಂಡರಿ) ಅರ್ಧಶತಕಗಳ ನಡುವೆ ಭರ್ತಿ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ, ಆರಂಭಿಕ ಆಘಾತದ ಬಳಿಕ ಟ್ರಾವಿಸ್ ಹೆಡ್-ಮಾರ್ನಸ್ ಲಬುಶೇನ್ (58*ರನ್, 110 ರನ್, 4 ಬೌಂಡರಿ) ಸಮಯೋಚಿತ ಜತೆಯಾಟದ ಬಲದಿಂದ ಆಸೀಸ್ 43 ಓವರ್‌ಗಳಲ್ಲಿ 4 ವಿಕೆಟ್‌ಗೆ 241 ರನ್‌ಗಳಿಸಿ ಇನ್ನೂ 42 ಎಸೆತ ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರಿತು. ಟೂರ್ನಿಯುದ್ದಕ್ಕೂ ಎದುರಾಳಿ ಪಾಲಿಗೆ ದುಃಸ್ವಪ್ನವಾಗಿದ್ದ ಭಾರತದ ಬೌಲಿಂಗ್ ವಿಭಾಗವೂ, ಅದರಲ್ಲೂ ಪ್ರಮುಖವಾಗಿ ಸ್ಪಿನ್ ಬೌಲಿಂಗ್ ೈನಲ್‌ನಲ್ಲಿ ಭಾರಿ ನಿರಾಸೆ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts