More

    ಮೇ ೧೩ ರಿಂದ ವಿಜಯನಗರದಲ್ಲಿ ‌ಅಮೃತ ಕಾಲ: ಆನಂದ‌ ಸಿಂಗ್

    ಹೊಸಪೇಟೆ: ಎಫ್ ಡಿವಿ(ಫಸ್ಟ್ ಡೆವೆಲಪ್ಮೆಂಟ್ ವಿಜಯನಗರ) ಸಂಕಲ್ಪದೊಂದಿಗೆ ಈ ಬಾರಿ ಚುನಾವಣೆಯನ್ನು ಎದುರಿಸಬೇಕು. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮೇ ೧೩ ರಿಂದ ವಿಜಯನಗರದಲ್ಲಿ ಅಮೃತ ಕಾಲ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅಭಿಪ್ರಾಯ ಪಟ್ಟರು.
    ನಗರದ ಸಿದ್ಧಿ ಪ್ರಿಯಾ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ನಮೋ‌ ಆಪ್ ಮೂಲಕ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭವಿಷ್ಯದಲ್ಲಿ ವಿಜಯನಗರ ಕ್ಷೇತ್ರ ಮತ್ತು ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿ‌ಯನ್ನಾಗಿಸಬೇಕು. ಅದಕ್ಕಾಗಿ ‘ಎಫ್ ಡಿವಿ‌’ ಸಂಕಲ್ಪದೊಂದಿಗೆ ಹೆಜ್ಜೆ ಹಾಕಬೇಕು ಎಂದರು.
    ನೂತನ ವಿಜಯನಗರ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಕುರಿತು ಸ್ಪಷ್ಟ ಕಲ್ಪನೆ ಹೊಂದಿರುವ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಪಕ್ಷ‌‌ ಸಂಘಟನೆ, ಚುನಾವಣೆಯಲ್ಲಿ ತಳ ಮಟ್ಟದ ಕಾರ್ಯಕರ್ತರೇ ಜೀವಾಳ.
    ಕೇಂದ್ರ ಮತ್ತು ರಾಜ್ಯದ ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿಕೊಡಬೇಕು. ಮೇ‌ ೧೦ ರಂದು ಮತದಾರರನ್ನು ಮತಗಟ್ಟೆಗೆ ಕರೆತಂದು, ಮತ ಹಾಕಿಸುವವರೆಗೆ ಕಾರ್ಯಕರ್ತರು ವಿಶ್ರಮಿಸಬಾರದು ಎಂದು ಸಲಹೆ ನೀಡಿದರು.
    ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್, ಹುಡಾ ಅಧ್ಯಕ್ಷ ಅಶೋಕ‌ ಜೀರೆ, ನಗರಸಭೆ ಅಧ್ಯಕ್ಷೆ‌ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಮಂಡಲ ಅಧ್ಯಕ್ಷ ಕಾಸಟ್ಟಿ ಉಮಾಪತಿ, ಪ್ರಮುಖರಾದ ಸಾಲಿ ಸಿದ್ದಯ್ಯ, ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು, ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts