More

    ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…

    ನವದೆಹಲಿ: ಹುಡುಗಿಯರು, ಹೆಂಗಸರು ಸೌಂದರ್ಯವೃದ್ಧಿಸಿಕೊಳ್ಳುವ ಸಲುವಾಗಿ ಲೇಸರ್ ಚಿಕಿತ್ಸೆ ಮುಂತಾದವನ್ನು ಮಾಡಿಸಿಕೊಳ್ಳುತ್ತಾರೆ. ಅಂಥದ್ದೇ ಒಂದು ಲೇಸರ್ ಚಿಕಿತ್ಸೆಗೆ ಒಳಗಾದ ಬ್ಯೂಟಿಷಿಯನ್​ ಒಬ್ಬರು ಏನೋ ಮಾಡಿಸಿಕೊಳ್ಳಲು ಹೋಗಿ ಏನೋ ಆದಂತಾಗಿ, ಫಜೀತಿಗೆ ಸಿಲುಕಿದ್ದಾರೆ.

    ಅನವಶ್ಯಕ ಕೂದಲು ತೆಗೆಸಿಕೊಳ್ಳಲು ಎಂಟು ಸಲ ಲೇಸರ್ ಚಿಕಿತ್ಸೆಗೆ ಒಳಗಾದ ಈ ಬ್ಯೂಟಿಷಿಯನ್​ಗೆ ಇದೀಗ ಆ ಚಿಕಿತ್ಸೆಯೇ ಮುಳುವಾಗಿದೆ. ಕೂದಲು ಕಳೆದುಕೊಳ್ಳಲು ಹೋಗಿ ಫೀಲಿಂಗ್ಸ್ ಕಳೆದುಕೊಳ್ಳುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಈ ಮಹಿಳೆ, ಆ ಲೇಸರ್ ಚಿಕಿತ್ಸಾ ಕೇಂದ್ರದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

    ಇಂಗ್ಲೆಂಡ್​ನ ಲಿವರ್​ಪೂಲ್​ ಎಂಬಲ್ಲಿನ ನಿವಾಸಿ, 31 ವರ್ಷದ ಮಹಿಳೆ ಸನಾ ಸೊಹೈಲ್ ಎಂಬಾಕೆಯೇ ಸಂತ್ರಸ್ತೆ. 2018ರಲ್ಲಿ ಪ್ರತಿಷ್ಠಿತ ಲೇಸರ್ ಚಿಕಿತ್ಸಾ ಕೇಂದ್ರಕ್ಕೆ ತೆರಳಿದ್ದ ನಾನು 2 ಲಕ್ಷ ರೂಪಾಯಿ ನೀಡಿ ಕೂದಲು ತೆಗೆಸಿಕೊಳ್ಳುವ ಲೇಸರ್ ಚಿಕಿತ್ಸೆಗೆ ಒಳಗಾದೆ. ಆದರೆ ಆ ಬಳಿಕ ಚರ್ಮದಲ್ಲಿ ಬೊಕ್ಕೆ ಕಾಣಿಸಿಕೊಂಡಿದ್ದು, ಸಾಕಷ್ಟು ಸಮಸ್ಯೆಗಳು ಉಂಟಾಗಿವೆ.

    ಆ ಲೇಸರ್ ಚಿಕಿತ್ಸೆ ಪಡೆದ ಜಾಗದಲ್ಲಿ ಬೊಕ್ಕೆಗಳು ಕಾಣಿಸಿಕೊಂಡಿದ್ದಷ್ಟೇ ಅಲ್ಲ, ಕೂದಲು ತೆಗೆಸಲು ಚಿಕಿತ್ಸೆ ಪಡೆದರೂ ಮತ್ತೆ ಮೊದಲಿಗಿಂತ ಜಾಸ್ತಿ ಕೂದಲುಗಳು ಬೆಳೆದಿವೆ. ಮಾತ್ರವಲ್ಲ, ನನಗೀಗ ಹೆಂಗಸು ಎನ್ನುವ ಫೀಲೇ ಆಗುತ್ತಿಲ್ಲ ಎಂದು ಸನಾ ಹೇಳಿಕೊಂಡಿದ್ದಾರೆ. ಹಾರ್ಮೋನಲ್ಲಿ ವ್ಯತ್ಯಾಸ ಆಗಿದೆ ಎನಿಸುತ್ತಿದೆ. ಎಲ್ಲಕ್ಕಿಂತ ಜಾಸ್ತಿ, ಚಿಕಿತ್ಸೆ ಪಡೆದ ಬಳಿಕ ಯಾವ್ಯಾವ ಮುಂಜಾಗ್ರತೆ ಪಡೆಯಬೇಕು ಎಂಬುದನ್ನೇ ಆ ಚಿಕಿತ್ಸಾ ಕೇಂದ್ರದವರು ತಿಳಿಸಿಲ್ಲ ಎಂದು ಸನಾ ಸ್ಥಳೀಯ ಮಾಧ್ಯಮವೊಂದರ ಬಳಿ ತಮ್ಮ ಸಮಸ್ಯೆ ಬಗ್ಗೆ ಅಲವತ್ತುಕೊಂಡಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ‘ಕರ್ನಾಟಕ ಭವನವೇನು ನಿಮ್ಮ​ ಬೆಡ್​ ರೂಮಾ?’ ಬಿಜೆಪಿ ನಾಯಕರಿಗೆ ಕಾಂಗ್ರೆಸ್​ ಪ್ರಶ್ನೆ

    ಗಂಡನನ್ನು ಕಳೆದುಕೊಂಡ ಶಿಕ್ಷಕಿಯನ್ನು ವಿದ್ಯಾರ್ಥಿಯೇ ಸಂತೈಸಿದ!; ವೈರಲ್​ ಆಯ್ತು ಆ ಚಿತ್ರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts