More

    ವಿದ್ಯಾರ್ಥಿಗಳ ಆ್ಯಡ್ಮಿಷನ್​ ಮಾಡಿಸಲು ‘ಸೇಲ್ಸ್​ಮನ್​’ ಆಗದ್ದಕ್ಕೆ ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದ ಶಿಕ್ಷಕ

    ನೆಲ್ಲೂರು: ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಶಾಲಾ- ಕಾಲೇಜುಗಳಿನ್ನೂ ಆರಂಭವಾಗಿಲ್ಲ. ಪ್ರವೇಶ ಪ್ರಕ್ರಿಯೆ ಮಂದಗತಿಯಲ್ಲಿದ್ದು, ಕಳೆದ ಕೆಲ ತಿಂಗಳಿನಿಂದ ಶಿಕ್ಷಕರಿಗೆ ಸಂಬಳವೂ ಸಿಕ್ಕಿಲ್ಲ.

    ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲೂ ಕೂಡ ಉದ್ಯೋಗ ಕಡಿತ ಆರಂಭವಾಗಿದೆ. ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದ ಶಿಕ್ಷಕನಿಗೆ ಹಳೆಯ ವಿದ್ಯಾರ್ಥಿಗಳೇ ನೆರವಿನ ಹಸ್ತ ಚಾಚಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

    ಕಳೆದ 15 ವರ್ಷಗಳಿಂದ ನೆಲ್ಲೂರಿನ ನಾರಾಯಣ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತೆಲುಗು ಭಾಷೆಯನ್ನು ಬೋಧಿಸುತ್ತಿದ್ದ ಶಿಕ್ಷಕ ವೆಂಕಟಸುಬ್ಬಯ್ಯ ಎಂಬುವರನ್ನು ಸಂಸ್ಥೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ. ಕೆಲಸ ಇಲ್ಲದ್ದರಿಂದ ಜೀವನ ಸಾಗಿಸಲು ಬೇರೆ ದಾರಿಯಿಲ್ಲದೇ, ಆತ ಬಾಳೆಹಣ್ಣು ಮಾರಾಟದಲ್ಲಿ ತೊಡಗಿದ್ದರು.

    ಇದನ್ನೂ ಓದಿ; ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…! 

    ಈ ವಿಚಾರ ಹಳೆಯ ವಿದ್ಯಾರ್ಥಿಗಳಿಗೆ ತಿಳಿದಿದೆ. ತಮಗೆ ವಿದ್ಯೆ ನೀಡಿದ ಗುರುವಿಗೆ ಬಂದ ಸ್ಥಿತಿಗೆ ಮರುಗಿದ್ದಾರೆ. ಅಂತೆಯೇ, ನೆರವಾಗಲು ನಿರ್ಧರಿಸಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಅವರಿಂದ ಕಲಿತಿದ್ದ 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗುರುವಿಗಾಗಿ ಅಭಿಯಾನವನ್ನೇ ಆರಂಭಿಸಿದ್ದಾರೆ. ಈವರೆಗೆ 86,300 ರೂ.ಗಳನ್ನು ಸಂಗ್ರಹಿಸಿದ್ದಾರೆ.

    ಪ್ರವೇಶ ಜವಾಬ್ದಾರಿಯೂ ಶಿಕ್ಷಕರದ್ದೇ: ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಸುವುದು ಕೂಡ ಶಿಕ್ಷಕರ ಜವಾಬ್ದಾರಿ. ಲಾಕ್​ಡೌನ್​ ಕಾಲದಲ್ಲಿ ಮನೆ ಮನೆಗೆ ತೆರಳಿ ಪ್ರವೇಶ ಮಾಡಿಸಲು ವಿದ್ಯಾರ್ಥಿಗಳ ಮನವೊಲಿಸುವುದು ಕಷ್ಟದ ಕೆಲಸ ಎಂದು ವೆಂಕಟಸುಬ್ಬಯ್ಯ ಆಡಳಿತ ಮಂಡಳಿಗೆ ತಿಳಿಸಿದ್ದರು. ಇದೇ ಅವರ ಉದ್ಯೋಗಕ್ಕೆ ಮುಳುವಾಗಿದೆ. ನೀವು ಕೆಲಸಕ್ಕೆ ಅಸಮರ್ಥರು ಎಂದು ಕಾರಣ ನೀಡಿ ವಜಾ ಮಾಡಿರುವುದಾಗಿ ವೆಂಕಟಸುಬ್ಬಯ್ಯ ಹೇಳಿದ್ದಾರೆ. ಇವರನ್ನು ಕೆಲಸದಿಂದ ತೆಗೆದ ದಿನದಂದೇ ಇನ್ನೂ ಆರು ಜನರನ್ನು ಸಂಸ್ಥೆ ಕೈಬಿಟ್ಟಿದೆ.

    ಇದನ್ನೂ ಓದಿ; ಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! ಪರೀಕ್ಷಿಸಿಕೊಳ್ಳಿ…

    ಈಗಾಗಲೇ ಬೇಕಾದಷ್ಟು ಸಾಲ ಮಾಡಿಕೊಂಡಿದ್ದೇನೆ. ಇನ್ನಷ್ಟು ಸಾಲ ಮಾಡಿ ತೀರಿಸುವ ಶಕ್ತಿ ನನಗಿಲ್ಲ. ಮಗನ ಅನಾರೋಗ್ಯದ ಚಿಕಿತ್ಸೆಗೆ ಹಣ ಬೇಕಾಗಿದೆ. ಹೀಗಾಗಿ ಬಾಳೆಹಣ್ಣು ಮಾರುವ ಕಾಯಕದಲ್ಲಿ ತೊಡಗಿದ್ದೇನೆ ಎಂದು ವೆಂಕಟಸುಬ್ಬಯ್ಯ ಸಂಕಷ್ಟ ತೋಡಿಕೊಂಡಿದ್ದಾರೆ.
    ಹಳೆಯ ವಿದ್ಯಾರ್ಥಿಗಳು ನನ್ನ ನೆರವಿಗೆ ಬಂದಿದ್ದಾರೆ ಎಂದರೆ, ಅವರ ಮೇಲೆ ನನ್ನ ಪ್ರಭಾವವಿದೆ ಎಂದೇ ಅರ್ಥ. ಇದೊಂದು ತಾತ್ಕಾಲಿಕ ಉದ್ಯೋಗವಾಗಿದ್ದು, ಆದಷ್ಟು ಬೇಗ ಶಿಕ್ಷಕ ವೃತ್ತಿಗೆ ಮರಳುತ್ತೇನೆ ಎನ್ನುವುದು ಅವರ ವಿಶ್ವಾಸ.

    ಸಾಲ್ಮನ್​ ಮೀನಿನಲ್ಲಿತ್ತು ಕರೊನಾ ವೈರಸ್​; ಮಾರಾಟ ಬಂದ್​, ಮಾರುಕಟ್ಟೆ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts