More

    ರಾಜ್ಯದ ಮತ್ತೊಂದು ಶಾಲೆಯಲ್ಲೂ ನಮಾಜ್; ಹಿಜಾಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು

    ಬಾಗಲಕೋಟೆ: ದಕ್ಷಿಣಕನ್ನಡ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ಪ್ರಕರಣ ಬೆಳಕಿಗೆ ಬಂದ ಬೆನ್ನಿಗೇ ರಾಜ್ಯದ ಮತ್ತೊಂದು ಶಾಲೆಯಲ್ಲಿ ವಿದ್ಯಾರ್ಥಿನಿಯರು ನಮಾಜ್ ಸಲ್ಲಿಸಿದ ಪ್ರಕರಣ ಬಹಿರಂಗಗೊಂಡಿದೆ.

    ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ಮೌಲಾನಾ ಆಜಾದ್ ಆಂಗ್ಲ‌ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಶಾಲಾ ಕೊಠಡಿಯ ವರಾಂಡಾದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ನಮಾಜ್ ಸಲ್ಲಿಸಿದ್ದಾರೆ.

    ಶಿಕ್ಷಕರ ಗಮನಕ್ಕೆ ಬಾರದಂತೆ ಆರು ವಿದ್ಯಾರ್ಥಿನಿಯರು ಶಾಲಾ ಆವರಣದಲ್ಲಿ ನಮಾಜ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಈಗ ವೈರಲ್ ಆಗುತ್ತಿದೆ. ಹಿಜಾಬ್​-ಕೇಸರಿ ಸಂಘರ್ಷದ ಜತೆಗೆ ಈಗ ನಮಾಜ್ ಕೂಡ ಸೇರಿಕೊಳ್ಳುತ್ತಿರುವುದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ ಉಂಟುಮಾಡಿದೆ.

    ಶಾಲೆಯಲ್ಲೇ ನಮಾಜ್​!; ಹಿಜಾಬ್ ಬೆನ್ನಿಗೇ ಮತ್ತೊಂದು ವಿವಾದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts