More

    ಕೇರಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಕಾಂಗ್ರೆಸ್​!

    ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಅವಮಾನ ಬಳಿಕ ಕಾಂಗ್ರೆಸ್​ ಪಕ್ಷದ ಕೇಂದ್ರ ನಾಯಕರು ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

    ಅನೇಕ ಮೂಲಗಳ ಪ್ರಕಾರ ಬಹು ದೊಡ್ಡ ಸಂಖ್ಯೆಯ ಸಂಸದರು, ಶಾಸಕರು ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಸದಸ್ಯರು ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವವನ್ನು ಪುನರುಜ್ಜೀವನಗೊಳಿಸಲು ಎದುರು ನೋಡುತ್ತಿದ್ದಾರೆ. ಅಲ್ಲದೆ, ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದೆ.

    ಕೇರಳದ ಚುನಾಯಿತ ಪ್ರತಿನಿಧಿಗಳೊಂದಿಗೆ ನಡೆದ ಮುಖಾಮುಖಿ ಸಭೆಗಳಲ್ಲಿ ದೆಹಲಿಯ ಕಾಂಗ್ರೆಸ್ ನಾಯಕತ್ವಕ್ಕೆ ರಾಜ್ಯದ ಪಕ್ಷದ ಸ್ಥಿತಿಗತಿಯನ್ನು ತಿಳಿಸಲಾಗಿದೆ.

    ಇನ್ನು ಕೇರಳದಲ್ಲಿ ಪ್ರತಿಪಕ್ಷ ನಾಯಕ ಸ್ಥಾನದ ಬದಲಾವಣೆಯ ಕೂಗು ಸಹ ಕೇಳಿಬಂದಿದೆ. ಪ್ರಸ್ತುತ 65 ವರ್ಷದ ರಮೇಶ್​ ಚೆನ್ನಿಥಲಾ ಅವರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರಿಗೆ ಮಾಜಿ ಸಿಎಂ ಓಮನ್​ ಚಾಂಡಿ ಬಣದ ಬೆಂಬಲವೂ ಇದೆ. ಆದರೂ ಎರಡು ಪ್ರತಿಸ್ಪರ್ಧಿ ಬಣಗಳು ಅವರ ಪರವಾಗಿ ಕೈಜೋಡಿಸಿದರೂ ಸಹ, ಶ್ರೀ ಚೆನ್ನಿಥಲಾ ಅವರ ಬೆಂಬಲ ಸಂಪೂರ್ಣವಾಗುವುದಿಲ್ಲ.

    ಯಾರು ಪ್ರತಿಪಕ್ಷ ನಾಯಕ ಸ್ಥಾನದ ಬದಲಾವಣೆ ಬಯಸುತ್ತಾರೆ ಅವರು 56 ವರ್ಷದ ವಿ.ಡಿ. ಸತೀಸನ್​ ಅವರಿಗೆ ಬೆಂಬಲ ನೀಡಲಿದ್ದಾರೆ. ಸತೀಸನ್​ ಅವರು ನಿರಂತರವಾಗಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸತೀಸನ್​ ಅವರು ಪ್ರತಿಪಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಯು ಇದೆ.

    ಸತೀಸನ್ ಸಹ ರಮೇಶ್ ಚೆನ್ನಿಥಲಾ ಅವರ ಬಣದೊಂದಿಗೆ ಗುರುತಿಸಿಕೊಂಡಿದ್ದರು. ಆದರೆ, ಮೂಲಗಳು ಪ್ರಕಾರ ಕಳೆದ ಎರಡು ವರ್ಷಗಳಿಂದ ಅವರು ಕಾಂಗ್ರೆಸ್​ನೊಳಗೆ ಬಣ ರಾಜಕೀಯ ಆರಂಭವಾದಾಗಿನಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ.

    ಮುಂದಿನ ಸೋಮವಾರ ಕೇರಳ ವಿಧಾನಸಭೆಯ ಹೊಸ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕಾಂಗ್ರೆಸ್​ ತನ್ನ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿದ್ದು, ಕುತೂಹಲಕಾರಿಯಾಗಿದೆ. (ಏಜೆನ್ಸೀಸ್​)

    ಮಕ್ಕಳ ಕಾಳಜಿ ಅಗತ್ಯ; ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು..

    ಭಾರತ ಪರ ದೀರ್ಘಕಾಲ ಆಡಲು ಸಾಧ್ಯವಾಗದ ಬಗ್ಗೆ ಕಾರಣ ವಿವರಿಸಿದ ರಾಬಿನ್ ಉತ್ತಪ್ಪ

    ಕ್ರಿಕೆಟ್​ ಮಂಡಳಿ ವಿರುದ್ಧವೇ ಮುನಿಸಿಕೊಂಡ ಶ್ರೀಲಂಕಾ ಕ್ರಿಕೆಟಿಗರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts