More

    ಕ್ರಿಕೆಟ್​ ನಂತರ ಪತ್ನಿಯೊಂದಿಗೆ ನಟನೆಯತ್ತ ಮುಖಮಾಡಿದ ಸಿಕ್ಸರ್​ ಕಿಂಗ್​ ಯುವರಾಜ್​ ಸಿಂಗ್​!

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ ಕ್ರಿಕೆಟ್ ವೃತ್ತಿ ಜೀವನದ ನಂತರ ಇದೀಗ ಜೀವನದ ಮತ್ತೊಂದು ಇನ್ನಿಂಗ್ಸ್​ ಆರಂಭಿಸಲು ನಿರ್ಧರಿಸಿದ್ದು, ನಟನೆಯ ಕಡೆ ತಮ್ಮ ಆಸಕ್ತಿಯನ್ನು ಹೊರಳಿಸಿದ್ದಾರೆ ಎಂದು ತಿಳಿದುಬಂದಿದೆ.

    ಯುವರಾಜ್​ ಸಿಂಗ್​ ಅವರು ಪತ್ನಿ ಹಜೇಲ್​ ಕೀಚ್​ ಮತ್ತು ಸಹೋದರ ಜೋರಾವರ್​ ಸಿಂಗ್​ರೊಂದಿಗೆ ವೆಬ್​ ಸರಣಿಯಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ವೆಬ್​ ಸರಣಿಯನ್ನು ಡ್ರೀಮ್​ ಹೌಸ್​ ಪ್ರೊಡಕ್ಷನ್ ಆಫ್​ ಅಸ್ಸಾಂ ನಿರ್ಮಾಣ ಮಾಡಲಿದೆ. ​

    ವೆಬ್​ ಸರಣಿಯಲ್ಲಿ ಯುವಿ ಸಹೋದರ ಜೋರಾವರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವಿ ತಾಯಿ ಶಬ್ನಮ್​ ಸಿಂಗ್​ ಕೂಡ ಅಭಿನಯಿಸಲಿದ್ದಾರೆ ಎಂದು ಪ್ರೊಡಕ್ಷನ್​ ಬ್ಯಾನರ್​ ನೀತಾ ಶರ್ಮಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ವೇಳೆ ಶಬ್ನಮ್​ ಸಿಂಗ್​ ಕೂಡ ಉಪಸ್ಥಿತರಿದ್ದರು. ಅಲ್ಲದೆ, ವೆಬ್​ ಸರಣಿಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.​

    ನಿಜವಾದ ಯುವರಾಜ್​ ಸಿಂಗ್​ ಮತ್ತು ಜೋರಾವರ್​ ಸಿಂಗ್​ ಅವರನ್ನು ವೆಬ್​ ಸರಣಿ ಮೂಲಕ ವಿಶ್ವವೇ ನೋಡಲಿದೆ. ಇದರಲ್ಲಿ ಹೆಚ್ಚಾಗಿ ನನ್ನ ಕಿರಿಯ ಮಗ ಜೋರೊವರ್​ ಮೇಲೆ ಗಮನ ನೀಡಲಾಗಿದೆ. ತಾಯಿಯಾಗಿ ನನ್ನಿಬ್ಬರು ಮಕ್ಕಳು ಮತ್ತು ಸೊಸೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಬ್ನಮ್​ ಹೇಳಿದರು.

    ನಟ ಅಕ್ಷಯ್​ ಕುಮಾರ್​ ಅವರ ಮುಂದಿನ ಬಚ್ಚನ್​ ಪಾಂಡೆ ಚಿತ್ರದಲ್ಲಿ ತೊಡಗಿಕೊಂಡಿರುವ ಬಾಲಿವುಡ್​ ಬರಹಗಾರ ವಿಪಿನ್​ ಉನಿಯಾಲ್ ಕೂಡ ಈ ವೆಬ್​ ಸರಣಿಗೆ ಸಾಥ್​ ನೀಡಿದ್ದು, ಇನ್ನಿತರ ಬಾಲಿವುಡ್​ ಕಲಾವಿದರು ಕೂಡ ವೆಬ್​ ಸರಣಿಯಲ್ಲಿ ಒಳಗೊಳ್ಳುವ ಸಾಧ್ಯತೆ ಇದೆ ಎಂದು ನೀತಾ ಶರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts