More

    ತಾಜ್​ ತೊಳೆಯುತ್ತಿದ್ದಾರೆ ಎಂದು ಟ್ರೋಲ್​ ಮಾಡಿದ್ದ ಪಾಕಿಸ್ತಾನಿಯರಿಗೆ ಖಡಕ್ಕಾಗಿ ಉತ್ತರಿಸಿದ ಪಾಕ್​ ಮೂಲದ ಗಾಯಕ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬಂದಿರುವ ಹಿನ್ನೆಲೆ ದೇಶದ ಹಲವು ಪ್ರದೇಶಗಳಲ್ಲಿ ನಡೆಸಲಾಗುತ್ತಿದ್ದ ಸಿದ್ಧತೆಗಳು ಭಾರೀ ಪ್ರಮಾಣದ ಚರ್ಚೆಗೆ ಕಾರಣವಾಗಿತ್ತು. ತಾಜ್​ ಮಹಲ್​ನ್ನು ನೀರಿನಿಂದ ತೊಳೆಯುತ್ತಿದ್ದ ವಿಡಿಯೋವೊಂದನ್ನು ಪಾಕಿಸ್ತಾನಿ ಟ್ರೋಲಿಗರು ಟ್ವಿಟ್ಟರ್​ನಲ್ಲಿ ಹಾಕಿ ಬಿಜೆಪಿ ಸರ್ಕಾರಕ್ಕೆ ಗೇಲಿ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಪಾಕ್​ ಮೂಲದ ಭಾರತೀಯ ಗಾಯಕ ಅದ್ನಾನ್​ ಸಾಮಿ, ವಿಡಿಯೋದಲ್ಲಿರುವುದು ತಾಜ್​ಮಹಲ್​ ಅಲ್ಲ ಎನ್ನುವ ಸತ್ಯವನ್ನು ಬಿಚ್ಚಿಡುವುದರ ಮೂಲಕ ಟ್ರೋಲಿಗರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

    ಪಾಕಿಸ್ತಾನಿ ಟ್ರೋಲಿಗ ಟ್ರೋಲ್​ ಮಾಡಿರುವ ವಿಡಿಯೋವನ್ನು ಶೇರ್​​ ಮಾಡಿರುವ ಅದ್ನಾನಿ ಸಾಮಿ, “ಮೊದಲು ನಿಮ್ಮ ಮೆದುಳನ್ನು ಮತ್ತು ನಿಯತ್ತನ್ನು ಸ್ವಚ್ಛಗೊಳಿಸಿಕೊಳ್ಳಿ. ಎರಡನೆಯದಾಗಿ ತಾಜ್​ಮಹಲ್​ನ್ನು ಸ್ವಚ್ಛಗೊಳಿಸಲು ನಮ್ಮ ಬಳಿ ತಾಜ್​ಮಹಲ್​ ಇರಬೇಕು. ನಿಮ್ಮ ಬಳಿ ತಾಜ್​ಮಹಲ್​ ಇಲ್ಲ. ಮೂರನೆಯದಾಗಿ ಇದು ತಾಜ್​ಮಹಲ್​ ಅಲ್ಲವೇ ಅಲ್ಲ, ಬದಲಾಗಿ ಭೋಪಾಲ್​ನಲ್ಲಿರುವ ತಾಜ್​ಮಹಲ್​ನ ಪ್ರತಿಕೃತಿ. ನಕಲು ಮಾಡುತ್ತಿರುವ ನಿಮ್ಮನ್ನು ನೋಡಿದರೆ ನನಗೆ ನಿಮ್ಮ ಉತ್ಸುಕತೆ ಅರ್ಥವಾಗುತ್ತದೆ. ನಿಮ್ಮ ಸೀಮಿತ ವ್ಯಾಪ್ತಿಯು ಈ ಉತ್ಸುಕತೆಯನ್ನು ನಿಯಂತ್ರಿಸಲು ಬಿಡುವುದಿಲ್ಲ ಎನ್ನುವುದು ನನಗೆ ಗೊತ್ತು.” ಎಂದು ಟ್ವೀಟ್​ ಮಾಡಿದ್ದಾರೆ.

    ಆಫ್ತಾಬ್​ ಹಸನ್​ ಹೆಸರಿನ ಪಾಕಿಸ್ತಾನಿ ವ್ಯಕ್ತಿ ಭೋಪಾಲ್​ನಲ್ಲಿರುವ ತಾಜ್​ಮಹಲ್​ನ ಪ್ರತಿಕೃತಿಯನ್ನು ನೀರಿನಲ್ಲಿ ತೊಳೆಯುತ್ತಿರುವ ವಿಡಿಯೋ ಹಾಕಿ, ಡೊನಾಲ್ಡ್​ ಟ್ರಂಪ್​ಗೆ ತಾಜ್​ಮಹಲ್​ನ್ನು ತೋರಿಸಲು ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಮುಸ್ಲಿಮರನ್ನು ಭಾರತದ ಎರಡನೆಯ ದರ್ಜೆಯ ಪ್ರಜೆಗಳು ಎಂದು ಪರಿಗಣಿಸಿರುವ ಉಗ್ರರ ರಾಜ ಮೋದಿ ಮತ್ತು ಷಾ ಅವರಿಗೆ ತಾಜ್​ಮಹಲ್​ನ್ನು ನಿರ್ಮಿಸಿರುವುದು ಮುಸ್ಲಿಮರು ಎನ್ನುವುದು ಗೊತ್ತಿದೆ ಎಂದು ಟ್ವೀಟ್​ ಮಾಡಿದ್ದ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts