More

    18 ದಿನಗಳ ಜೀವನ್ಮರಣ ಹೋರಾಟದ ಬಳಿಕ ಸಾವಿಗೀಡಾದ ಆ್ಯಸಿಡ್ ಸಂತ್ರಸ್ತೆ!

    ಮುಂಬೈ: ಆ್ಯಸಿಡ್ ಸಂತ್ರಸ್ತೆಯೊಬ್ಬರು 18 ದಿನಗಳ ಜೀವನ್ಮರಣ ಹೋರಾಟ ನಡೆಸಿ ಸಾವಿಗೀಡಾಗಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ 54 ವರ್ಷದ ಮಹಿಳೆಯನ್ನು ಕೊನೆಗೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ಈ ಪ್ರಕರಣ ನಡೆದಿದೆ.

    ಗೀತಾ ಅಜಿತ್ ವಿರ್ಕರ್ ಎಂಬಾಕೆ ಸಾವಿಗೀಡಾದ ಮಹಿಳೆ. ಈಕೆ ಮುಂಬೈನ ಕಲ್ಬಾದೇವಿಯ ಫನಸ್​ವಾಡಿ ಪ್ರದೇಶದ ನಿವಾಸಿ. ಈಕೆ ಮೇಲೆ ಜ. 13ರಂದು ಆ್ಯಸಿಡ್ ದಾಳಿ ನಡೆದಿತ್ತು. ಈಕೆಯ ಜೊತೆಗಾರ ಮಹೇಶ್​ ವಿಶ್ವನಾಥ್ ಪೂಜಾರಿ (62) ಈಕೆಯ ಮೇಲೆ ಸಲ್ಫ್ಯೂರಿಕ್​ ಆ್ಯಸಿಡ್ ಎರಚಿದ್ದು, ಮಹಿಳೆ ಶೇ. 50 ಸುಟ್ಟಗಾಯಗಳಿಗೆ ಒಳಗಾಗಿದ್ದಳು.

    ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಆತ ಈಕೆಯ ಮೇಲೆ ಆ್ಯಸಿಡ್ ಎರಚಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹೇಶ್ 25 ವರ್ಷಗಳಿಂದ ಗೀತಾ ಜತೆಗಿದ್ದು, ಜ. 10ರಂದು ಈಕೆಯ ಪುತ್ರ ಆದಿತ್ಯನೊಂದಿಗೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಜ. 13ರಂದು ಗಲಾಟೆ ನಡೆದು ಘಟನೆ ನಡೆದಿರಬಹುದು ಎಂದು ಆದಿತ್ಯ ಪೊಲೀಸರಿಗೆ ವಿವರಣೆ ನೀಡಿದ್ದ.

    ಗೀತಾಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜ. 14ರಂದು ಇನ್ನೊಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸುಟ್ಟಗಾಯಗಳಿಂದ ತೀವ್ರ ಅನಾರೋಗ್ಯಗೊಂಡ ಗೀತಾಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಿದ್ದರೂ ಬದುಕಿಸಿಕೊಳ್ಳಲು ಆಗಿಲ್ಲ. ಇಂದು ಆಕೆಯ 18 ದಿನಗಳ ಜೀವನ್ಮರಣ ಹೋರಾಟ ಸಾವಿನಲ್ಲಿ ಕೊನೆಗೊಂಡಿದೆ.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts