More

    ಆಫ್ರಿಕಾಗೆ ಅನ್ನಭಾಗ್ಯ ಅಕ್ಕಿ ದಂಧೆಯ ತನಿಖೆ: ಗಿರಣಿ ಮಾಲೀಕರು, ಸಗಟು ವ್ಯಾಪಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ

    ಬೆಂಗಳೂರು: ಬಡವರಿಗೆ ಮೀಸಲಿರಬೇಕಾದ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಆಫ್ರಿಕಾ ರಾಷ್ಟ್ರಗಳ ಪಾಲಾಗುತ್ತಿರುವುದನ್ನು ಬಯಲಿಗೆಳೆದ ವಿಜಯವಾಣಿ ವರದಿ ಕೊನೆಗೂ ಸರ್ಕಾರದ ಕಣ್ತೆರೆಸಿದೆ. ಕಳೆದ 2 ವರ್ಷಗಳಲ್ಲಿ ರಾಜ್ಯದ ಎಲ್ಲ ಅಕ್ಕಿ ಗಿರಣಿ ಮಾಲೀಕರು ಹಾಗೂ ಅಕ್ಕಿ ಸಗಟು ವ್ಯಾಪಾರಿಗಳು ವಹಿವಾಟು ನಡೆಸಿರುವ ಮಾಹಿತಿಗಳನ್ನು ಸಂಗ್ರಹಿಸಿ ತುರ್ತಾಗಿ ಸಲ್ಲಿಸಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳು, ಜಂಟಿ ಮತ್ತು ಉಪ ನಿರ್ದೇಶಕರಿಗೆ ಆಹಾರ ಇಲಾಖೆ ಆದೇಶ ಹೊರಡಿಸಿದೆ.

    “ಅನ್ನಭಾಗ್ಯ ಅಕ್ಕಿ ಆಫ್ರಿಕಾ ಪಾಲು’ ಶೀಷಿರ್ಕೆಯಡಿ ಆ.25ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಅಕ್ಕಿ ಗಿರಣಿಗಳು ಹಾಗೂ ಅಕ್ಕಿ ಸಗಟು ವ್ಯಾಪಾರಿಗಳು 2019ರ ಜ.1ರಿಂದ 2020ರ ಡಿ.31ರವರೆಗಿನ ಅಕ್ಕಿ ವಹಿವಾಟು ನಡೆಸಿದ್ದ ಮಾಹಿತಿ ನೀಡಬೇಕೆಂದು ಇಲಾಖೆಯ ಜಾಗೃತಿ ಮತ್ತು ತನಿಖಾ ದಳ ತಿಳಿಸಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಬಿಡುಗಡೆ ಮಾಡಿರುವ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಖರೀದಿಸಿ ಮಾರಾಟ ಮಾಡುವ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿದೆ. ಬೆಂಗಳೂರು, ಕೋಲಾರ, ತುಮಕೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಂತಹ ದೊಡ್ಡ ಪ್ರಕರಣಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತನಿಖಾ ದಳ ಮಾಹಿತಿ ನೀಡಿದೆ.

    ಸೂಚನೆ ಏನು?
    ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುವ ಅಕ್ಕಿ ಗಿರಣಿ ಮಾಲೀಕರು ನಂತರ ಶುದ್ಧೀಕರಿಸಿ ವಿವಿಧ ಬ್ರಾ$್ಯಂಡ್​ಗಳ ಹೆಸರಿನಲ್ಲಿ ಮರು ಪ್ಯಾಕಿಂಗ್​ ಮಾಡಿ ಹೆಚ್ಚಿನ ಬೆಲೆಗೆ ದೇಶ ವಿದೇಶಿಗಳ ಮಾರುಕಟ್ಟೆಗೆ ಮಾಡುತ್ತಿದ್ದಾರೆ. ಇದರಿಂದ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದ್ದರಿಂದ ಅಕ್ಕಿ ಗಿರಣಿಗಳು ಹಾಗೂ ವ್ಯಾಪಾರಸ್ಥರ ವಹಿವಾಟುಗಳ ಮೇಲೆ ನಿಗಾ ಇಡುವುದು ಹಾಗೂ ಕಾಲಕಾಲಕ್ಕೆ ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ತನಿಖಾ ದಳ ತಿಳಿಸಿದೆ.

    ಅಕ್ರಮ ದಂಧೆಯ ಹೆಜ್ಜೆ
    ಕಾಳದಂಧೆಕೋರರ ಜತೆ ಶಾಮೀಲಾಗಿ ಅಕ್ಕಿ ಗಿರಣಿ ಮಾಲೀಕರು ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಅಕ್ಕಿಯಲ್ಲಿನ ಕಲ್ಲು, ಮಣ್ಣು, ನುಚ್ಚು ತೆಗೆದು ಶುದ್ಧೀಕರಿಸಿ ಗುಣಮಟ್ಟದ ಅಕ್ಕಿಯಾಗಿ ಪರಿವತಿರ್ಸುತ್ತಿದ್ದಾರೆ. ಈ ಅಕ್ಕಿಯನ್ನು ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ 50 ಕೆಜಿ ತೂಕದ ಗೋಣಿ ಚೀಲ, 25 ಕೆಜಿ ತೂಕದ ಪ್ಲಾಸ್ಟಿಕ್​ ಚೀಲದಲ್ಲಿ ಪ್ಯಾಕಿಂಗ್​ ಮಾಡಿ ದೇಶ&ವಿದೇಶಗಳಿಗೆ ರ್ತು ಮಾಡುತ್ತಿದ್ದಾರೆ. ಈ ವಹಿವಾಟು, ದಾಸ್ತಾನಿನ ಖರೀದಿ, ಮಾರಾಟದ ಬಗ್ಗೆ ಲೆಕ್ಕ ಪತ್ರಗಳಿಲ್ಲ, ಪ್ಯಾಕೇಜಿಂಗ್​ ಆ್ಯಂಡ್​ ಲೇಬಲಿಂಗ್​ ವಿವರ ನಮೂದಿಸಲ್ಲ, ದಾಳಿ ವೇಳೆ ಅಕ್ರಮ ಪತ್ತೆಯಾಗದಂತೆ ತಂತ್ರಜ್ಞಾನ ಅಳವಡಿಸುತ್ತಿರುವ ದಂಧೆಯ ಸಮಗ್ರ ವಿವರವನ್ನು ವಿಜಯವಾಣಿ ಬೆಳಕಿಗೆ ತಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts