More

    ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಚಟುವಟಿಕೆ ಹೇಗಿದೆ ಗೊತ್ತೇ?

    ಕಾಬೂಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಮುಂಬರುವ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗಾಗಿ ಸಿದ್ಧತೆ ಕೈಗೊಳ್ಳಲು ಎರಡು ದಿನಗಳ ಹಿಂದಷ್ಟೇ ಆರಂಭಿಸಿರುವ ತರಬೇತಿ ಶಿಬಿರವೂ ನಿರಾತಂಕವಾಗಿ ಸಾಗಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ದೇಶವನ್ನು ವಶಪಡಿಸಿಕೊಂಡ ಎರಡು ದಿನಗಳಲ್ಲೇ ಕ್ರಿಕೆಟ್ ಚಟುವಟಿಕೆಗಳು ಎಂದಿನಂತೆ ಸಾಗಿವೆ. ತಂಡದ ಆಟಗಾರರು ಉತ್ಸುಕವಾಗಿಯೇ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ತಿಳಿಸಿದೆ. ಶ್ರೀಲಂಕಾದಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಆಯೋಜಿಸಲಾಗಿದೆ. ತಾಲಿಬಾನ್ ಉಗ್ರರು ದೇಶವನ್ನು ವಶಪಡಿಸಿಕೊಂಡರೂ ಕ್ರಿಕೆಟ್ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಎಸಿಬಿ ಸಿಇಒ ಹಮಿದ್ ಶಿನ್ವಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮೇರಠ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಹಾಕಿ ದಿಗ್ಗಜ ಧ್ಯಾನ್‌ಚಂದ್ ಹೆಸರು

    ‘ವಿಮಾನಯಾನ ಪುನರಾಂಭಗೊಂಡ ಬಳಿಕ ಶ್ರೀಲಂಕಾಗೆ ತಂಡವನ್ನು ಕಳುಹಿಸುತ್ತಿದ್ದು, ಯಾವುದೇ ಅಡ್ಡಿ ಆತಂಕವಿಲ್ಲದೆ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ’ ಎಂದರು. ದೇಶದ ಕೆಲವೊಂದು ಕಡೆ ಹಿಂಸಾಚಾರ ನಡೆಯುತ್ತಿದ್ದರೂ ತಾಲಿಬಾನಿಗಳು ಕ್ರಿಕೆಟ್‌ಗೆ ತೊಂದರೆ ನೀಡಿಲ್ಲ. ಹಿಂದೆಯೂ ಅವರು ಕ್ರಿಕೆಟ್‌ಗೆ ತೊಂದರೆ ನೀಡಿರಲಿಲ್ಲ ಎಂದು ವಿವರಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಮಹಿಳಾ ಕ್ರಿಕೆಟ್ ಚಟುವಟಿಕೆ ಕುರಿತು ಹೇಳುವುದು ಕಷ್ಟಕರ. ಮುಂಬರುವ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ಗೂ ಚಾಲನೆ ಸಿಗುವ ವಿಶ್ವಾಸವಿದೆ ಎಂದರು.

    ಇದನ್ನೂ ಓದಿ: ಎನ್‌ಸಿಎ ಮುಖ್ಯಸ್ಥರಾಗಿ ರಾಹುಲ್ ದ್ರಾವಿಡ್ ಮುಂದುವರಿಕೆ ?

    ತಂಡದ ಸ್ಟಾರ್ ಆಟಗಾರರಾದ ರಶೀದ್ ಖಾನ್ ಹಾಗೂ ಮೊಹಮದ್ ನಬಿ ಇಂಗ್ಲೆಂಡ್‌ನಲ್ಲಿದ್ದು, ದ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಉಳಿದಂತೆ ತಂಡದ ಬಹುತೇಕ ಆಟಗಾರರು ಆ್ಘನ್‌ನಲ್ಲೇ ಇದ್ದಾರೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವೆ ಸೆಪ್ಟೆಂಬರ್ 3 ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಅಲ್ಲದೆ, ಸೆಪ್ಟೆಂಬರ್ 10 ರಿಂದ ಕಾಬೂಲ್‌ನಲ್ಲಿ ಟಿ20 ಲೀಗ್ ಆರಂಭವಾಗಲಿದೆ ಎಂದು ಎಸಿಬಿ ಈಗಾಗಲೇ ಪ್ರಕಟಿಸಿದೆ.

    ಕ್ರಿಕೆಟ್ ಚಟುವಟಿಕೆಗಳಿಗೆ ಅಡ್ಡಿ ಮಾಡಲ್ಲ ಎಂದ ತಾಲಿಬಾನಿ ಉಗ್ರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts