More

    ಕಾರ್ಗೋ ಜೆಟ್​​ನಲ್ಲಿ ಕಾಬುಲ್​ ತೊರೆದ ಅಫ್ಘನ್​ ಪಾಪ್​ ಸ್ಟಾರ್​ ಅರ್ಯಾನಾ!

    ದೋಹ: ಅಫ್ಘಾನಿಸ್ತಾನದ ಅತಿಜನಪ್ರಿಯ ಮಹಿಳಾ ಪಾಪ್​​ ಸ್ಟಾರ್​ ಅರ್ಯಾನಾ ಸಯೀದ್​ ಅವರು ತಾಲಿಬಾನ್​ ಆಕ್ರಮಿತ ಕಾಬುಲ್​​ನಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್​ ವರದಿ ಮಾಡಿದೆ. ಈ ಬಗ್ಗೆ ಗಾಯಕಿ ಹಾಗೂ ಗೀತರಚನಾಕಾರರಾದ ಅರ್ಯಾನಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

    “​ಎರಡು ಮರೆಯಲಾರದ ರಾತ್ರಿಗಳ ನಂತರ ಖತಾರ್​ನ ದೋಹ ತಲುಪಿದ್ದೇನೆ. ನಾನು ಆರಾಮವಾಗಿದ್ದೇನೆ. ಇಲ್ಲಿಂದ ಇಸ್ತಾನ್​ಬುಲ್​ನ ನನ್ನ ಮನೆಗೆ ತೆರಳಲಿದ್ದೇನೆ” ಎಂದು ಇನ್ಸ್​ಟಾಗ್ರಾಂನ ತಮ್ಮ 1.3 ಮಿಲಿಯನ್ ಫಾಲೋವರ್ಸ್​ಗೆ ಅರ್ಯಾನಾ ಪೋಸ್ಟ್​ನಲ್ಲಿ ತಿಳಿಸಿದ್ದಾರೆ. “ಮನೆಗೆ ಹಿಂತುರುಗಿ, ನನ್ನ ಮನಸ್ಸು ಗಾಬರಿ ಮತ್ತು ಅಪನಂಬಿಕೆಗಳ ಜಾಲದಿಂದ ಸಹಜಸ್ಥಿತಿಗೆ ಮರಳಿದ ನಂತರ, ನಿಮ್ಮೊಂದಿಗೆ ಹಂಚಿಕೊಳ್ಳಲು ನನ್ನ ಬಳಿ ಹಲವು ಕಥೆಗಳಿವೆ” ಎಂದು ಬರೆದಿದ್ದಾರೆ.

    ತಾಲಿಬಾನ್​ ಉಗ್ರವಾದದ ವಿರುದ್ಧ ಮಾತನಾಡುತ್ತಿದ್ದ ಅಫ್ಘನ್ ಮಹಿಳೆಯರಲ್ಲಿ 36 ವರ್ಷದ ಅರ್ಯಾನಾ ಕೂಡ ಒಬ್ಬರು. ಅಫ್ಘನ್ ಟೆಲಿವಿಷನ್​ನ ಗಾಯನ ಸ್ಪರ್ಧೆಯ ಶೋನ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಆಕೆ, ಅಮೆರಿಕದ ಕಾರ್ಗೋ ಜೆಟ್​ ಒಂದರಲ್ಲಿ ಕಾಬುಲ್​​ನಿಂದ ಹೊರಟುಬಂದರು. ತಮ್ಮ ಪತಿ ಅಫ್ಘನ್​ ಸಂಗೀತ ನಿರ್ಮಾಪಕ ಹಸೀಬ್​ ಸಯ್ಯೆದ್​ ಅವರೊಂದಿಗೆ ಟರ್ಕಿಯ ಇಸ್ತಾನ್​ಬುಲ್​ ನಗರದಲ್ಲಿ ವಾಸ್ತವ್ಯ ಹೊಂದಿದ್ದು, ಸದ್ಯಕ್ಕೆ ಅಲ್ಲಿಗೇ ಹೋಗಿ ನೆಲೆಸಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ ಅಫ್ಘಾನ್‌ನಿಂದ ಯಾವ್ಯಾವ ದೇಶಗಳಿಗೆ ಹೋದವರೆಷ್ಟು? ಇಲ್ಲಿದೆ ಅಂಕಿ ಅಂಶ

    “ಅರ್ಯಾನಾ ಸಯೀದ್​ 2015 ರಲ್ಲಿ ಸ್ಟೇಡಿಯಂ ಒಂದರಲ್ಲಿ ಹಾಡಿದ್ದು, 3 ಟಬೂಗಳನ್ನು ಮಾಡಿದ್ದಾರೆ. 1. ಮಹಿಳೆಯಾಗಿ ಹಾಡುವುದು, 2. ಹಿಜಾಬ್​ ಧರಸದಿರುವುದು 3. ಮಹಿಳೆಯಾಗಿ ಕ್ರೀಡಾಂಗಣವನ್ನು ಪ್ರವೇಶಿಸಿದ್ದು – ಇವೆಲ್ಲವೂ ತಾಲಿಬಾನ್​ ನಿಷೇಧಿಸುವಂಥವು. ಈಗ ಇವೆಲ್ಲವೂ ಕನಸಾಗಿ ಮಾರ್ಪಟ್ಟಿವೆ” ಎಂದೊಬ್ಬರು ಮಾನವ ಹಕ್ಕುಗಳ ಚಳುವಳಿಗಾರರು ಟ್ವೀಟ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ಇಂದು ರಾಜ್ಯದಲ್ಲಿ ಪ್ರೌಢಶಾಲೆ-ಕಾಲೇಜು ಪುನರಾರಂಭದ ಸಂಭ್ರಮ! ವಿದ್ಯಾರ್ಥಿಗಳೊಂದಿಗೆ ಸಿಎಂ ಬೊಮ್ಮಾಯಿ ಮಾತು

    VIDEO| ‘ಈಗ ಎಲ್ಲಾ ಜೀರೋ ಆಗಿಬಿಟ್ಟಿದೆ’ – ಕಣ್ಣೀರು ಹಾಕಿದ ಅಫ್ಘಾನಿಸ್ತಾನದ ಮಾಜಿ ಸಂಸದ

    20 ಎಳೆಯ ಕರುಗಳ ಸಾವಿಗೆ ಕಾರಣರಾಗಿದ್ದ ದುಷ್ಕರ್ಮಿಗಳು ಪೊಲೀಸರ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts