More

    ಮನೆ ಇಲ್ಲಾ ಸ್ವಾಮಿ.. ಎಂದು ಗ್ರಾ.ಪಂ. ಕಚೇರಿಯಲ್ಲಿ ಠಿಕಾಣಿ ಹೂಡಿದರು!

    ಹಾವೇರಿ: ತಮ್ಮ ಮನೆಗಳು ಮಳೆಯಿಂದ ಹಾಳಾಗಿದ್ದರೂ ಅಧಿಕಾರಿಗಳು ಅವನ್ನು ಪುನರ್ವಸತಿ ಮತ್ತು ಪರಿಹಾರಕ್ಕಾಗಿ ರಿಜೆಕ್ಟ್ ಮಾಡಿದ ಹಿನ್ನೆಲೆಯಲ್ಲಿ ಕೆಲವು ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಬಂದು ಬಿಡಾರ ಬಿಟ್ಟಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುಂದೂರು ನೀರಲಗಿ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ. ಮಳೆಯಿಂದ ಹಾಳಾಗಿರುವ ಮನೆಗಳನ್ನು ರಿಜೆಕ್ಟ್ ಮಾಡಿದ್ದಾರೆಂದು ಆರೋಪಿಸಿ, ವಾಸ ಮಾಡಲಿಕ್ಕೆ ಮನೆ ಇಲ್ಲಾ ಸ್ವಾಮಿ ಎಂದು ಕೆಲವು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಎತ್ತಿನ ಬಂಡೆ, ಅಡುಗೆ ಸಾಮಗ್ರಿಗಳನ್ನಿಟ್ಟುಕೊಂಡು ಗ್ರಾಮ ಪಂಚಾಯತಿ ಕಚೇರಿ ಒಳಗೆ ಹಾಗೂ ಆವರಣದಲ್ಲಿ ಠಿಕಾಣಿ ಹೂಡಿ, ಅಡುಗೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಮೇಕಪ್​ ಕಲಾವಿದೆ ಆಗಿ ಸಮಂತಾ! ಅವರ ‘ಮಾಸ್ಟರ್​ಪೀಸ್’ ನೋಡಿ

    ಮನೆಗಳು ಸಂಪೂರ್ಣ ಬಿದ್ದಿವೆ. ಆದರೂ, ಗ್ರಾ.ಪಂ. ಅಧಿಕಾರಿಗಳು ಸಿ ಕೆಟಗರಿ ಮಾಡಿದ್ದಾರೆ. ಹಾಳಾದ ಮನೆಗಳನ್ನೇ ಇಂಜಿನಿಯರ್ ರಿಜೆಕ್ಟ್ ಮಾಡಿದಾರೆ. ನಮಗೆ ನ್ಯಾಯ ಸಿಗೋವರೆಗೂ ಇಲ್ಲೇ ಇರ್ತೀವಿ. ಇದು ಮುಖ್ಯಮಂತ್ರಿಗಳ ಕ್ಷೇತ್ರ. ಅಂತದ್ದರಲ್ಲಿ ಇಲ್ಲೇ ಅನ್ಯಾಯ ನಡೀತಾ ಇದೆ. ಮನೆ ಸಿಗೋವರೆಗೂ ನಾವು ಇಲ್ಲೇ ಇರುತ್ತೇವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

    ಸ್ಥಳಕ್ಕೆ ಶಿಗ್ಗಾವಿ ತಹಶೀಲ್ದಾರ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನಾಕಾರರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

    ಒಮಿಕ್ರಾನ್ ಭೀತಿಯ ನಡುವೆ ಭಾರತ ಸರ್ಕಾರ ನೀಡಿದೆ ಶುಭ ಸುದ್ದಿ

    ರೇಷ್ಮೆ ಸೀರೆ ತೊಟ್ಟು ಮಧ್ಯರಾತ್ರಿ ಊಟ ಬಡಿಸಿದ ಮಹಿಳೆ! ಪ್ರಶಂಸೆಯ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts