More

    ಮುಂದುವರಿದ ಜಿಟಿಜಿಟಿ ಮಳೆ

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶದ ಹಲವು ಗ್ರಾಮಗಳಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

    ತಾಲೂಕಿನಾದ್ಯಂತ ನಾಲ್ಕು ದಿನಗಳಿಂದ ನಿರಂತರ ಜಿಟಿ-ಜಿಟಿ ಮಳೆಗೆ ಕೊಕಟನೂರ, ಬಳವಾಡ, ಕಟಗೇರಿ, ರಡ್ಡೇರಹಟ್ಟಿ, ಘಟನಟ್ಟಿ, ನಂದಗಾಂವ, ಜನವಾಡ, ಸವದಿ ದರ್ಗಾ, ನಂದೇಶ್ವರ, ಶಿರಹಟ್ಟಿ, ಮಹಿಷವಾಡಗಿ, ನಾಗನೂರ ಪಿ.ಕೆ., ಅಡಹಳ್ಳಿ, ಕೋಹಳ್ಳಿ, ರಾಮತೀರ್ಥ, ಚಮಕೇರಿ, ಅಡಹಳ್ಳಟ್ಟಿ, ಕಕಮರಿ, ಕೊಟ್ಟಲಗಿ, ಬಾಡಗಿ, ಕಕಮರಿ, ಐಗಳಿ, ಅರಟಾಳ, ಯಲ್ಲಮ್ಮವಾಡಿ, ಸುಟ್ಟಟ್ಟಿ ಹಾಗೂ ಝುಂಜರವಾಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಜಿಟಿ-ಜಿಟಿ ಮಳೆಗೆ ಬಡಾವಣೆಗಳ ಹಾಗೂ ತೋಟದ ವಸತಿ ಪ್ರದೇಶಕ್ಕೆ ತೆರಳುವ ರಸ್ತೆಗಳು ಕೆಸರುಗದ್ದೆಗಳಂತೆ ಆಗಿವೆ. ಮುಖ್ಯ ರಸ್ತೆಯ ತಗ್ಗು ಗುಂಡಿಗಳಲ್ಲಿ ನೀರು ನಿಂತಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿವೆ. ಅಲ್ಲದೆ ಬೀದಿ ಬದಿ ಮತ್ತು ವಾರದ ಸಂತೆಗಳ ವ್ಯಾಪಾರಸ್ಥರ ವಹಿವಾಟಿಗೂ ತೊಂದರೆಯಾಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ಸಾಗುತ್ತಿರುವ ದಶ್ಯಗಳು ಕಂಡು ಬಂದವು, ಜಿಟಿ-ಜಿಟಿ ಮಳೆಯ ಜತೆ ಶೀತ ಗಾಳಿಯೂ ಬೀಸುತ್ತಿರುವುದರಿಂದ ವದ್ಧರು ಹಾಗೂ ಚಿಕ್ಕ ಮಕ್ಕಳು ಕಾಯಿಲೆಯಿಂದ ಬಳಲುವಂತಾಗಿದೆ.

    ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿರಲಿಲ್ಲ. ಹೀಗಾಗಿ ಅಥಣಿ ತಾಲೂಕಿನಲ್ಲಿ ಕಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಒಂದೂವರೆ ತಿಂಗಳು ತಡವಾಗಿ ಸುರಿಯುತ್ತಿರುವ ತುಂತುರು ಮಳೆಗೆ ಕಷಿ ಕಾರ್ಯಗಳು ಗರಿಗೆದರಿವೆ. ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಕಷ್ಣಾ ನದಿ ಮೇಲ್ಭಾಗದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಅಥಣಿ ತಾಲೂಕಿನ ಕೃಷ್ಣಾ ನದಿಗೆ ಶುಕ್ರವಾರ 80 ಸಾವಿರ ಕ್ಯೂಸೆಕ್ನೀ ರು ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನದಿಯ ದಂಡೆಯ ಜನರು ಎಚ್ಚರಿಕೆ ವಹಿಸುವಂತೆ ಡಂಗುರ ಸಾರಿ ಅರಿವು ಮೂಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts