More

    ಕೆಎಸ್​ಆರ್​ಟಿಸಿಯಲ್ಲಿ ಕಾದಿರಿಸಿದ್ದ ಮುಂಗಡ ಟಿಕೆಟ್​ಗಳು ರದ್ದು: ಹಣ ಮರುಪಾವತಿ ಪ್ರಕ್ರಿಯೆಗೆ ಚಾಲನೆ

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಕೆಎಸ್​ಆರ್​ಟಿಸಿ) ಏಪ್ರಿಲ್​ 14ರ ನಂತರದ ಪ್ರಯಾಣಕ್ಕಾಗಿ ಕಾದಿರಿಸಿದ್ದ ಟಿಕೆಟ್​ಗಳನ್ನು ರದ್ದುಪಡಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.

    ಒಟ್ಟು 5,200 ಟಿಕೆಟ್​ಗಳನ್ನು ರದ್ದುಪಡಿಸಲಾಗಿದೆ. ಈ ಪೈಕಿ 4,600 ಟಿಕೆಟ್​ಗಳನ್ನು ಮೊದಲೇ ಬುಕಿಂಗ್​ ಮಾಡಲಾಗಿತ್ತು ಎಂದು ಕೆಎಸ್​ಆರ್​ಟಿಸಿ ಮಾಹಿತಿ ನೀಡಿದೆ. ರದ್ದುಪಡಿಸಿದ ಟಿಕೆಟ್​ಗಳ ಹಣ ಮರುಪಾವತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜತೆಗೆ, ಮುಂದಿನ ಆದೇಶದವರೆಗೆ ಟಿಕೆಟ್​ ಬುಕಿಂಗ್​ಅನ್ನು ರದ್ದುಪಡಿಸಲಾಗಿದೆ. ರಾಜ್ಯದಲ್ಲಿ ಲಾಕ್​ಡೌನ್​ ಏಪ್ರಿಲ್​ 14ರ ನಂತರವೂ ಎರಡು ವಾರಗಳ ಕಾಲ ವಿಸ್ತರಣೆಯಾಗಿದ್ದು, ಸಾರ್ವಜನಿಕ ಸಾರಿಗೆಗೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ, ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಬಸ್​ಗಳ ಸಂಚಾಋವನ್ನು ಸ್ಥಗಿತಗೊಳಿಸಲಾಗಿದೆ. ಈ ಕಾರಣದಿಂದಾಗಿ ಸಂಸ್ಥೆ ಮುಂಗಡ ಕಾದಿರಿಸಿದ್ದ ಟಿಕಟ್​ಗಳನ್ನು ರದ್ದುಪಡಿಸಿದೆ.

    ಇದಲ್ಲದೇ. ದೇಶಾದ್ಯಂತ ಲಾಕ್​ಡೌನ್​ ಜಾರರಿಯಲ್ಲಿರುವ ಕಾರಣ ವಿಮಾನ ಯಾನ ಹಾಗೂ ರೈಲು ಸಂಚಾರವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಕೆಲ ವಿನಾಯ್ತಿಗಳನ್ನು ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದರೂ, ಸಾರ್ವಜನಿಕ ಸಾರಿಗೆ ಅಥವಾ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಅಲ್ಲದೆ, ಜಿಲ್ಲೆ ಹಾಗೂ ರಾಜ್ಯಗಳ ಗಡಿಗಳನ್ನು ಬಂದ್​ ಮಾಡಿರುವುದರಿಂದ ಬೇರೆ ಊರುಗಳಿಗೆ ತೆರಳುವುದು ಅಸಾಧ್ಯವಾಗಿದೆ.

    ರಾಜ್ಯದಲ್ಲಿ 226ಕ್ಕೇರಿದ ಕರೊನಾ ಸೋಂಕಿತರು: 47 ಮಂದಿ ಬಿಡುಗಡೆ- ಬೆಳಗಾವಿಯಲ್ಲಿ ನಾಲ್ಕು ಹೊಸ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts