More

    ಕಲಬೆರಕೆ ಮದ್ಯ ಪೂರೈಸುತ್ತಿದ್ದವರು ಅಂದರ್

    ಬೆಳಗಾವಿ: ಗೋವಾ ಹಾಗೂ ಕರ್ನಾಟಕ ಮದ್ಯಕ್ಕೆ ರಾಸಾಯನಿಕ ಮಿಶ್ರಣ ಮಾಡಿ ಹಲವು ಕಂಪನಿಗಳ ಸ್ಟಿಕ್ಕರ್ ಅಂಟಿಸಿ ನಕಲಿ ಮದ್ಯವನ್ನು ವಿವಿಧ ಬಾರ್‌ಗಳಿಗೆ ಪೂರೈಕೆ ಮಾಡುತ್ತಿದ್ದವರನ್ನು ಬೆಳಗಾವಿ ಸಿಸಿಬಿ ಪೊಲೀಸರು ಗುರುವಾರ ಹೆಡೆಮುರಿ ಕಟ್ಟಿದ್ದಾರೆ.

    ನಕಲಿ ಮದ್ಯ ಮಾರಾಟ ಜಾಲ ಭೇದಿಸಿರುವ ಪೊಲೀಸರು ಇಬ್ಬರನ್ನು ಬಂಸಿ, ಒಂದು ಕಾರು ಸೇರಿ 4 ಲಕ್ಷ ರೂ.ವೌಲ್ಯದ ನಕಲಿ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ. ಉಜ್ವಲ ನಗರದ ಹಸನ್ ಜಾವೇದ ಬೇಪಾರಿ(22) ಹಾಗೂ ಹಿಂಡಲಗಾ ವಿಜಯನಗರದ ರಾಜೇಶ ಕೇಶವ ನಾಯಕ(44) ಬಂತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಬಂತರಿಂದ ಒಟ್ಟು 4 ಲಕ್ಷ ವೌಲ್ಯದ 750 ಎಂಎಲ್‌ನ ವಿಸ್ಕಿ, ರಮ್, ವೋಡ್ಕಾ, ರಾಯಲ್ ಸ್ಟಾಗ್ ಮದ್ಯದ 439 ಬಾಟಲಿಗಳು, 375 ಎಂಎಲ್‌ನ ಓರಿಜಿನಲ್ ಚಾಯ್ಸ್ ಮದ್ಯದ 20 ಬಾಟಲಿ, 180 ಎಂಎಲ್‌ನ ಓಲ್ಡ್ ಟ್ಯಾವರಿನ್ ಮದ್ಯದ 2 ಟೆಟ್ರಾ ಪ್ಯಾಕ್ ಹಾಗೂ 17,500 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿರುವ ಒಂದು ಕಾರು, 4 ಮೊಬೈಲ್ ಜಪ್ತಿ ಮಾಡಲಾಗಿದೆ.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದ್ದರಾಮಪ್ಪ, ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳಾದ ಜಾವೇದ್ ಬೇಪಾರಿ ಹಾಗೂ ನಾಗೇಶ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಅಲ್ಲದೆ, ಆರೋಪಿಗಳು ಯಾವ ಅಂಗಡಿಗಳಿಗೆ ಈ ರಾಸಾಯನಿಕ ಮಿಶ್ರಿತ ಮದ್ಯ ಪೂರೈಸುತ್ತಿದ್ದರು ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮದ್ಯದಲ್ಲಿ ಬೆರೆಸಿರುವ ರಾಸಾಯನಿಕ ಪದಾರ್ಥಗಳ ಪತ್ತೆ ಹಚ್ಚುವ ನಿಟ್ಟಿನಲ್ಲಿ ಜಪ್ತಿ ಮಾಡಿಕೊಂಡಿರುವ ಮದ್ಯದ ಮಾದರಿಯನ್ನು ವಿವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ಸದಾಶಿವ ನಗರದ ವಿರೂಪಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ನಕಲಿ ಮದ್ಯದ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಪಿಐ ಅಲ್ತ್ಾ ಮುಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಕಲಿ ಮದ್ಯ ಮಾರಾಟ ಹಾಗೂ ರಾಸಾಯನಿಕ ಮಿಶ್ರಣದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಆಯುಕ್ತರು ತಿಳಿಸಿದರು.

    ನಕಲಿ ಮದ್ಯ ತುಂಬಿದ ಬಾಟಲಿ ಹಾಗೂ ಟೆಟ್ರಾ ಪ್ಯಾಕ್‌ಗಳಿಗೆ ವಿವಿಧ ಬ್ರಾಂಡ್‌ನ ಲೇಬಲ್ ಅಂಟಿಸಿ, ಅದೇ ಬ್ರ್ಯಾಂಡ್‌ನ ಬಾಕ್ಸ್‌ಗಳಲ್ಲಿ ಹಾಕಿ ಮೂಲ ಕಂಪನಿಯದ್ದೇ ಎಂಬಂತೆ ಬಿಂಬಿಸುತ್ತಿದ್ದರು. ಸರ್ಕಾರದ ಪರವಾನಗಿ ಇಲ್ಲದೆ ಲಾಭಕ್ಕೋಸ್ಕರ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಿದೆ ಎಂದರು.

    ಪ್ರಕರಣ ಭೇದಿಸಿದ ಸಿಪಿಐ ಮುಲ್ಲಾ ತಂಡಕ್ಕೆ ಅಭಿನಂದಿಸಿದ ಅವರು, 8 ಸಾವಿರ ನಗದು ಬಹುಮಾನ ವಿತರಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಪಿ.ವಿ.ಸ್ನೇಹಾ, ಶೇಖರ್ ಎಚ್.ಟಿ. ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts