More

    VIDEO| ಮತ್ತೆ ಮತ್ತೆ ಬಿದ್ದರೂ ಮೇಲೆದ್ದು ತನ್ನ ಕಾಲ ಮೇಲೆ ನಿಲ್ಲುವ ಪುಟಾಣಿ ಜಿರಾಫೆಯ ಪ್ರಯತ್ನದಲ್ಲಿ ಮನುಷ್ಯನಿಗೂ ಜೀವನ ಪಾಠವಿದೆ!

    ನವದೆಹಲಿ: ಪುಟಾಣಿ ಜಿರಾಫೆ ಮರಿ ತನ್ನ ಮೊದಲ ಹೆಜ್ಜೆ ಇಡುವ ಪ್ರಯತ್ನದ ಈ ಸಣ್ಣ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಆಗತಾನೇ ಹುಟ್ಟಿದ ಜಿರಾಫೆ ಮರಿ ಮೊದಲ ಹೆಜ್ಜೆ ಇಡಲು ಪ್ರಯತ್ನ ಪಡುತ್ತಿರುವ ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಶಾಂತ್​ ನಂದ ಅವರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋದಲ್ಲಿ ಪುಟಾಣಿ ಜಿರಾಫೆ ಎದ್ದು ನಿಲ್ಲಲು, ಮೊದಲ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದೆ. ಆದರೆ ಅದಕ್ಕೆ ನಿಲ್ಲಲಾಗದೇ ಪದೇಪದೆ ಬೀಳುತ್ತದೆ. ಹಾಗೆ ಬಿದ್ದರೂ ತನ್ನ ಪ್ರಯತ್ನ ಮಾತ್ರ ನಿಲ್ಲಿಸಲ್ಲ!

    ಈ ವಿಡಿಯೋ ಹಂಚಿಕೊಂಡ ಅಧಿಕಾರಿ ನಂದ ಅವರು, ಈ ಜಿರಾಫೆ ಮರಿ ಹುಟ್ಟಿದ 30-60 ನಿಮಿಷದಲ್ಲಿ ತನ್ನ ಹೆಜ್ಜೆ ಇಡಲು ಪ್ರಯತ್ನಿಸುತ್ತಿದೆ. ಆದರೆ ಅಂದಾಜು 10 ಗಂಟೆಗಳ ನಂತರವೇ ಅವರು ತನ್ನ ಹಿಂಡಿನೊಂದಿಗೆ ಓಡಲು ಸಾಧ್ಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts