More

    ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ: ಗಡುವಿನ ಬಳಿಕ ಕ್ರಮದ ಭರವಸೆ

    ಬೆಂಗಳೂರು: ನಾಮಫಲಕಗಳಲ್ಲಿ ಶೇ.60 ಪ್ರಮಾಣದಲ್ಲಿ ಕನ್ನಡ ಭಾಷ ಬಳಕೆ ಕಡ್ಡಾಯ ಜಾರಿ ಹಿನ್ನೆಲೆಯಲ್ಲಿ ಇನ್ನೂ 6 ಸಾವಿರ ಮಳೆಗೆದಾರರು ತಮ್ಮ ಬೋರ್ಡ್‌ಗಳನ್ನು ಬದಲಾಯಿಸಬೇಕಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

    ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ 48 ಸಾವಿರ ಮಳಿಗೆಗಳಲ್ಲಿ ನಾಮಫಲಕ ಬದಲಾಯಿಸಬೇಕಿರುವುದು ಸರ್ವೆ ವೇಳೆ ಕಂಡುಬಂದಿತ್ತು. ಈ ಪೈಕಿ ಈವರೆಗೆ 42 ಸಾವಿರ ಮಳಿಗೆದಾರರು ನಿಯಮ ಪಾಲಿಸಿದ್ದು, ಇನ್ನೂ 6 ಸಾವಿರ ಮಳಿಗೆಗಳಿಂದ ಇನ್ನಷ್ಟೇ ಕ್ರಮ ಆಗಬೇಕಿದೆ. ನಾಮಫಲಕ ಬದಲಾವಣೆಗೆ ಫೆ.28ರ ವರೆಗೆ ಗಡುವು ನೀಡಿದ್ದು, ಮರುದಿನದಿಂದಲೇ ನಿಯಮಾನುಸಾರ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು.

    ಈಗಾಗಲೇ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಅನ್ವಯ ಬೆಂಗಳೂರಿನ ಎಲ್ಲ ಅಂಗಡಿ, ಮುಂಗಟ್ಟು, ಕಂಪನಿ, ಸಂಸ್ಥೆ, ವಾಣಿಜ್ಯ ಮಳಿಗೆಗಳಲು, ಕಾರ್ಖಾನೆಗಳು, ಸಂಘ-ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆ ಸೇರಿ ಎಲ್ಲೆಡೆ ಶೇ.60 ಕನ್ನಡ ಕಡ್ಡಾಯ ಬಳಕೆ ಸಂಬಂಧ ವಿಧೇಯಕವನ್ನು ಒಪ್ಪಲಾಗಿದೆ. ಇದನ್ನು ಪೂರ್ಣಪ್ರಮಾಣದಲ್ಲಿ ಜಾರಿಗೆ ಬರುವ ಮುನ್ನ ಬಾಕಿ ಉಳಿದಿರುವ ಮಳಿಗೆಗಳಲ್ಲಿ ಬೋರ್ಡ್‌ಗಳು ಬದಲಾಯಿಸುವ ನಿರೀಕ್ಷೆ ಇದೆ. ತಪ್ಪಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts