More

    ಬುದ್ಧನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಿಕ್ಷಕಿ ಜಯಶ್ರೀ ಬೂದಿಹಾಳ ಸಲಹೆ

    ಯಲಬುರ್ಗಾ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಬುದ್ಧನ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದ್ದು. ಅವರು ದೇಶ ಅಭಿವೃದ್ಧಿ ಮಾಡಲು ಶ್ರಮಿಸಿದ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಿಕ್ಷಕಿ ಜಯಶ್ರೀ ಬೂದಿಹಾಳ ಹೇಳಿದರು.


    ತಾಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವಬಂಧು ಸೇವಾ ಗುರುಬಳಗ ಗುರುವಾರ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಹಾಗೂ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ಬುದ್ಧನ ಜೀವನದ ತತ್ವಗಳನ್ನು ಎಲ್ಲರೂ ಪಾಲಿಸಬೇಕು

    ಬುದ್ಧನ ಜೀವನದ ಕುರಿತು ನೀಡಿದ ಅಮೂಲ್ಯ ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಬದುಕಿನ ಪ್ರಕ್ರಿಯೆಯಲ್ಲಿ ಪರಿಪೂರ್ಣತೆ ಸಾಧಿಸಲು ನಿರಂತರ ಪ್ರಯತ್ನ ಅವಶ್ಯವಾಗಿದೆ. ಹೊಸಳ್ಳಿ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ ಉತ್ತಮವಾಗಿ ನಡೆಸುವುದರ ಜತೆಗೆ ಆಕರ್ಷಕ ಮತ್ತು ಉಪಯುಕ್ತ ಗೋಡೆ ಬರಹ ಸೇವೆ ಸಲ್ಲಿಸಿದ ಗುರುಬಳಗದ ಕಾರ್ಯ ಶ್ಲಾಘನೀಯವಾಗಿದೆ. ರಜಾ ದಿನಗಳಲ್ಲಿ ವಿನೂತನ ಚಟುವಟಿಕೆ ಕೈಗೊಂಡಿರುವುದು ಮಕ್ಕಳ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.


    ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ, ಉಪನ್ಯಾಸಕ ಮಲ್ಲಿಕಾರ್ಜುನ ಕುಂಬಾರ ಮಾತನಾಡಿದರು. ಮುಖ್ಯಶಿಕ್ಷಕ ಅಖಂಡಪ್ಪ ಮಾಯಾಚಾರಿ, ಶಿಕ್ಷಕರಾದಪ್ರಭಯ್ಯ ಬಳಗೇರಿಮಠ, ಮೆಹಬೂಬ್ ಬಾದಶಹ, ರವೀಂದ್ರ ರಾಜೂರು, ವಿಜಯಲಕ್ಷ್ಮೀ, ಪರಮೇಶ ಚಿಂತಾಮಣಿ, ಶಂಕರ ಹಳ್ಳಿ, ಮಾರುತಿ ಹಾದಿಮನಿ, ಶಿವಕುಮಾರ ಮುತ್ತಾಳ, ಮಂಜುನಾಥ ಮನ್ನಾಪುರ, ಮುರ್ತುಜಾಸಾಬ್ ಮುಜಾವರ, ಕಲ್ಲಪ್ಪ ಅಲ್ಲಾಪುರ, ಬಸಯ್ಯ ಬಳಗೇರಿಮಠ, ಶ್ರೀಕಾಂತಗೌಡ ಪಾಟೀಲ್, ಸಿದ್ರಾಮಪ್ಪ ತಿಪ್ಪರಸನಾಳ, ಶಿವಕುಮಾರ ಹೊಂಬಳ, ವಿಶ್ವನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts