More

    ಇದು ಅದಿತಿ ಕಾಲ; ವಿನಯ್ ಚಿತ್ರಕ್ಕೆ ಸಿಕ್ಕ ನಾಯಕಿ

    ಬೆಂಗಳೂರು: ಅದಿತಿ ಪ್ರಭುದೇವ ಅಭಿನಯದ ನಾಲ್ಕು ಚಿತ್ರಗಳ ಚಿತ್ರೀಕರಣವಾಗಿ, ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಇದಲ್ಲದೆ ಇನ್ನೂ ನಾಲ್ಕು ಚಿತ್ರಗಳಲ್ಲಿ ಅದಿತಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಇನ್ನೂ ಎರಡು ಚಿತ್ರಗಳನ್ನು ಅದಿತಿ ಹೊಸದಾಗಿ ಒಪ್ಪಿಕೊಂಡಿರುವ ಸುದ್ದಿಯೊಂದು ಬಂದಿದೆ. ಹೌದು, ಅದಿತಿ ಎರಡು ಚಿತ್ರಗಳನ್ನು ಹೊಸದಾಗಿ ಒಪ್ಪಿದ್ದಾರಂತೆ. ಹಾಗಂತ ಗಾಂಧಿನಗರದಲ್ಲಿ ಫುಲ್ ಸುದ್ದಿಯಾಗಿದೆ. ಈ ಎರಡನ್ನೂ ಲೆಕ್ಕ ಹಾಕಿದರೆ ಸಂಖ್ಯೆ ಹತ್ತಾಗುತ್ತದೆ.

    ಅದಿತಿ ಒಪ್ಪಿರುವ ಎರಡು ಚಿತ್ರಗಳ ಪೈಕಿ ಮೊದಲನೆಯದು. ‘ಅಂದೊಂದಿತ್ತು ಕಾಲ’. ಎಲ್ಲೋ ಕೇಳಿದಂತನಿಸುತ್ತಿರಬಹುದು. ಅದು ನಿಜ. ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಪುನೀತ್ ಅಭಿನಯದ ‘ನಮ್ಮ ಬಸವ’ ಚಿತ್ರದಲ್ಲಿ ‘ಅಂದೊಂದಿತ್ತು ಕಾಲ …’ ಎಂಬ ಹಾಡಿತ್ತು ಮತ್ತು ಈ ಹಾಡು ಸಾಕಷ್ಟು ಜನಪ್ರಿಯವೂ ಆಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವಾಗುತ್ತಿದೆ. ವಿನಯ್ ರಾಜಕುಮಾರ್ ಹೀರೋ ಆಗಿ ಅಭಿನಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಅವರಿಗೆ ನಾಯಕಿಯಾಗಿ ಅದಿತಿ ಅಭಿನಯಿಸುತ್ತಿದ್ದಾರೆ. ಕೀರ್ತಿ ಎನ್ನುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಫೆಬ್ರವರಿ 15ರಂದು ಚಿತ್ರ ಪ್ರಾರಂಭವಾಗಲಿದೆ.

    ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್ ಗಾಣಿಗ ಕೆಲವು ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದು ನೆನಪಿರಬಹುದು. ಈ ಚಿತ್ರದ ಹೆಸರು ಮತ್ತು ಪ್ರಜ್ವಲ್​ಗೆ ನಾಯಕಿ ಯಾರಾಗುತ್ತಾರೆ ಎಂಬ ವಿಷಯವನ್ನು ಸದ್ಯದಲ್ಲೇ ಬಹಿರಂಗ ಮಾಡುವುದಾಗಿ ಅವರು ಹೇಳಿದ್ದರು. ಗುರುದತ್ ಬಹಿರಂಗ ಮಾಡದಿದ್ದರೂ, ಪ್ರಜ್ವಲ್​ಗೆ ನಾಯಕಿಯಾಗಿ ಅದಿತಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಪ್ರಜ್ವಲ್ ಹಾಗೂ ಅದಿತಿ ಇದುವರೆಗೂ ಜತೆಯಾಗಿ ನಟಿಸಿಲ್ಲ. ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ನಟಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈ ಚಿತ್ರ ಸಹ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗೆ ಹತ್ತು ಚಿತ್ರಗಳ ಟೈಟಲ್ ಕಾರ್ಡ್​ನಲ್ಲಿ ಅದಿತಿ ಹೆಸರು ಮುಂದಿನ ದಿನಗಳಲ್ಲಿ ಬರಲಿದ್ದು, ಈ ವರ್ಷವಷ್ಟೇ ಅಲ್ಲ, ಮುಂದಿನ ವರ್ಷ ಸಹ ಅದಿತಿ ಅಭಿನಯದ ಚಿತ್ರಗಳು ಆಗಾಗ ಬಿಡುಗಡೆಯಾಗುತ್ತಲೇ ಇರುತ್ತವೆ ಎನ್ನುವುದು ವಿಶೇಷ.

    ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ

    ಮಧ್ಯರಾತ್ರಿ ಕಿರುತೆರೆ ನಟಿಯನ್ನು ಕೆಣಕಿ ಜೈಲು ಪಾಲಾದ ನಾಲ್ವರು ದುಷ್ಕರ್ಮಿಗಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts