ಚಿತ್ರದುರ್ಗ: ಆಕಸ್ಮಿಕವಾಗಿ ಹರಡಿದ ಬೆಂಕಿಗೆ 2 ಎಕರೆ ವಿಸ್ತೀರ್ಣದ ಅಡಿಕೆ ತೋಟ ಆಹುತಿಯಾಗಿದೆ.
ಹೊಸದುರ್ಗ ತಾಲೂಕಿನ ನವಿಲೆಕಲ್ಲು ಭೋವಿ ಹಟ್ಟಿ ಗ್ರಾಮದ ಮೂರ್ತಪ್ಪ ಹಾಗೂ ಯಲ್ಲಪ್ಪ ಎಂಬುವವರಿಗೆ ಸೇರಿದ ಅಡಿಕೆ ತೋಟದಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ತೋಟದ ಪಕ್ಕದಲ್ಲಿದ್ದ ಖಾಲಿ ಜಮೀನಿನಲ್ಲಿ ಬೆಳೆದಿದ್ದ ಪೊದೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ನಂತರ ಅದು ತೋಟಕ್ಕೂ ಹರಡಿತು ಎಂದು ತಿಳಿದು ಬಂದಿದೆ.
ಬೆಂಕಿಯಿಂದ 2 ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಅಡಿಕೆ ಮರ, ಅದಕ್ಕೆ ನೀರು ಒದಗಿಸುವ ಡ್ರಿಪ್ ಪೈಪ್ಗಳು ಸುಟ್ಟಿವೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಮರ್ಯಾದೆ ಹರಾಜು ಹಾಕುತ್ತೇನೆ ಎಂಬ ಬೆದರಿಕೆಗೆ ನಲಪಾಡ್ ಹೆದರಿ ಪೊಲೀಸ್ ದೂರು ದಾಖಲಿಸಿದರೇ?: ಬೆದರಿಸಿದವರು ಯಾರು?!