More

    ಹುಳಿಯಾರು ಪಪಂ ಕಚೇರಿಯಲ್ಲಿ ಆಧಾರ್ ಕೇಂದ್ರ ಆರಂಭ ; ಮೈಲಿಯುದ್ದ ಕ್ಯೂ ನಿಲ್ಲುವ ಆತಂಕವೇ ಬೇಡ ; ನಿತ್ಯ 50 ಮಂದಿಗೆ ಟೋಕನ್ ವಿತರಣೆ

    ಹುಳಿಯಾರು : ಜಿಲ್ಲೆಯಲ್ಲೇ ಅತೀ ದೊಡ್ಡ ಹೋಬಳಿ ಕೇಂದ್ರವಾದ ಹುಳಿಯಾರಿನಲ್ಲಿ ಆಧಾರ್ ಕಾರ್ಡ್ ಮಾಡಿಸಲು ಮೈಲಿಯುದ್ದ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇನ್ಮೇಲೆ ಇರುವುದಿಲ್ಲ. ಏಕೆಂದರೆ ಜಿಲ್ಲಾಡಳಿತದ ವಿಶೇಷ ಗಮನಹರಿಸಿ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಪ್ರತ್ಯೇಕ ಆಧಾರ್ ಕೇಂದ್ರ ತೆರೆದಿದ್ದು, ಸಾರ್ವಜನಿಕರು ಅವಕಾಶ ಬಳಸಿಕೊಳ್ಳಬಹುದು.

    ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರೂ ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಶಾಲಾ ಮಕ್ಕಳ ದಾಖಲಾತಿ, ಬ್ಯಾಂಕ್ ಖಾತೆ ತೆರೆಲಾಗಲಿ ಮತ್ತು ಪಡಿತರ ಚೀಟಿಗೆ ಹೆಸರು ಸೇರ್ಪಡೆಗೆ ಆಧಾರ್ ನೋಂದಣಿ ಕಡ್ಡಾಯವಾಗಿದೆ. ಹಾಗಾಗಿ ಹುಳಿಯಾರು ನಾಡಕಚೇರಿಯ ಆಧಾರ್ ಕೇಂದ್ರಕ್ಕೆ ಆಧಾರ್ ನೋಂದಣಿ, ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಭಾವಚಿತ್ರ, ಸೇರಿ ಹಲವು ತಿದ್ದುಪಡಿಗಳಿಗಾಗಿ ನೂರಾರು ಜನರು ಬರುತ್ತಿದ್ದರು. ಆದರೆ ನಾಡಕಚೇರಿಯ ಆಧಾರ್ ನೋಂದಣಿ ಕೇಂದ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಿತ್ಯ ನೂರಾರು ಜನರು ಮಳೆ ಲೆಕ್ಕಿಸದೆ ಊಟತಿಂಡಿ ಬಿಟ್ಟು ಆಧಾರ್ ಕೇಂದ್ರದ ಬಳಿ ದಿನಕಳೆಯುತ್ತಿದ್ದರು.
    ಒಬ್ಬರೇ ಸಿಬ್ಬಂದಿ ಇದ್ದದ್ದೂ ಶೀಘ್ರ ಕೆಲಸ ಮಾಡಿಕೊಡಲು ಸಾಧ್ಯವಾಗುತ್ತಿರಲಿಲ್ಲ. ಜನ ಟೋಕನ್ ಪಡೆದು ನಿತ್ಯವೂ ಕೆಲಸವಾಗದೇ ವಾಪಾಸ್ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು.

    ಹೀಗಾಗಿ ಹುಳಿಯಾರು ನಾಡಕಚೇರಿಯ ಆಧಾರ್ ಕೇಂದ್ರದ ಸಮಸ್ಯೆ ಅರಿತ ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕಾಗಿ ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ ಪ್ರತ್ಯೇಕ ಆಧಾರ್ ಕೇಂದ್ರ ತೆರೆದಿದೆ.

    ನಿತ್ಯ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ಅಪ್ಡೇಟ್ ಮಾಡಲಾಗುತ್ತಿದೆ. ದಿನಕ್ಕೆ ಐವತ್ತು ಮಂದಿಗೆ ಅವಕಾಶವಿದ್ದು ಮೈಲಿಯುದ್ದ ಸಾಲನಲ್ಲಿ ಗಂಟೆಗಟ್ಟಲೆ ನಿಲ್ಲುವುದನ್ನು ತಪ್ಪಿಸಲು ಪಂಚಾಯಿತಿ ಸಿಬ್ಬಂದಿ ಟೋಕನ್ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡ್ಮೂರು ದಿನಗಳ ಅಡ್ವಾನ್ ಟೋಕನ್ ಕೊಡದೆ ನಿತ್ಯವೂ ಬೆಳಗ್ಗೆ 10 ರಂದ 10-30ರ ವರೆವಿಗೆ ಅಂದಿನ ಐವತ್ತು ಮಂದಿಗೆ ಟೋಕನ್ ಕೊಟ್ಟು ಆಧಾರ್ ತಿದ್ದುಪಡಿ ಮಾಡಲಾಗುವುದು.
    ಮಂಜುನಾಥ್ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts