More

    ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್​ಗೆ ನಾಳೆಯಿಂದ ಬೀಳುತ್ತೆ ದಂಡ!

    ನವದೆಹಲಿ: ದೇಶಾದ್ಯಂತ ಕೋವಿಡ್​-19 ಲಾಕ್​ಡೌನ್​ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್​ಗೆ ಹಾಗೂ ಉಳಿತಾಯ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದಿರುವುದಕ್ಕೆ ಬ್ಯಾಂಕ್​ಗಳು ವಿಧಿಸುತ್ತಿದ್ದ ದಂಡದಿಂದ ವಿನಾಯಿತಿ ನೀಡಿತ್ತು. ಈ ವಿನಾಯಿತಿಗಳು ಜೂನ್​ 30ರವರೆಗೆ ಮಾತ್ರ ಅನ್ವಯಿಸುತ್ತವೆ.

    ಆದರೆ, ಕೇಂದ್ರ ಸರ್ಕಾರ ಈ ಸೌಲಭ್ಯವನ್ನು ವಿಸ್ತರಿಸಿರುವ ಬಗ್ಗೆಯಾಗಲಿ ಅಥವಾ ವಿಸ್ತರಿಸುವ ಸಾಧ್ಯತೆ ಬಗ್ಗೆಯಾಗಲಿ ಏನೊಂದು ಮಾತು ಹೇಳಿಲ್ಲ. ಹಾಗಾಗಿ, ಜುಲೈ 1ರಿಂದ ಎಟಿಎಂನಲ್ಲಿ ಹೆಚ್ಚುವರಿ ಟ್ರ್ಯಾನ್ಸಾಕ್ಷನ್​ ಮಾಡುವ ಮುನ್ನ ಹಾಗೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದವರು ಎಚ್ಚರವಹಿಸುವುದು ಒಳಿತು. ಇಲ್ಲವಾದರೆ, ವಿನಾಕಾರಣ ಬ್ಯಾಂಕ್​ಗಳಿಗೆ ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ.

    ಇದನ್ನೂ ಓದಿ: ಸುಶಾಂತ್‌ ಟ್ವಿಟರ್‌ನ ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ

    ಕೋವಿಡ್​-19 ಹಿನ್ನೆಲೆಯಲ್ಲಿ ಮಾರ್ಚ್​ 24ರ ಮಧ್ಯರಾತ್ರಿಯಿಂದ ಜಾರಿಗೆ ಬಂದ ಲಾಕ್​ಡೌನ್​ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಉಳಿತಾಯ ಖಾತೆ ಹೊಂದಿರುವವರು ತಮ್ಮ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದೇ ಇದ್ದರೆ ಹಾಗೂ ಯಾವುದೇ ಬ್ಯಾಂಕ್​ನ ಎಟಿಎಂನಿಂದ ಹೆಚ್ಚುವರಿ ಟ್ರ್ಯಾನ್ಸಾಕ್ಷನ್​ ಮಾಡಿದರೆ ಜೂನ್​ 30ರವರೆಗೆ ದಂಡ ವಿಧಿಸದಂತೆ ಬ್ಯಾಂಕ್​ಗಳಿಗೆ ಸೂಚಿಸಿದ್ದರು. ಇದರಿಂದ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಿತ್ತು.

    ಆಗಸ್ಟ್​ 31ರವರೆಗೆ ಇಎಂಐ ಪಾವತಿ ಮೇಲೆ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ. ಕನಿಷ್ಠ ಬ್ಯಾಲೆನ್ಸ್​ ನಿರ್ವಹಿಸದ ಗ್ರಾಹಕರಿಗೆ ದಂಡ ವಿಧಿಸುವುದು, ಎಟಿಎಂನಿಂದ ಹೆಚ್ಚುವರಿ ಟ್ರಾನ್ಸಾಕ್ಷನ್​ಗೆ ದಂಡ ವಿಧಿಸುವುದರಿಂದ ವಿನಾಯಿತಿ ನೀಡುವ ಬಗ್ಗೆ ಅವರು ಏನೊಂದು ಹೇಳಿಕೆ ನೀಡಿಲ್ಲ.

    ಪ್ಯಾಂಗಾಂಗ್​ನ ವಿವಾದಿತ ಪ್ರದೇಶದಲ್ಲಿ ಚೀನಾದ ನಕ್ಷೆ ಬಿಡಿಸಿದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts