More

    2.2 ಶತಕೋಟಿ ಡಾಲರ್ ನೆರವಿನ ಭರವಸೆ ನೀಡಿತು ಏಷ್ಯನ್ ಡೆವಲಪ್​​ಮೆಂಟ್ ಬ್ಯಾಂಕ್​

    ನವದೆಹಲಿ: ದೇಶಾದ್ಯಂತ COVID19 ವೈರಸ್ ಸೋಂಕು ಹರಡದಂತೆ ತಡೆಯಲು ಸರ್ಕಾರ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಇದೇ ವೇಳೆ, ನಮ್ಮ ದೇಶದ ಪ್ರಯತ್ನಕ್ಕೆ ಪೂರಕವಾಗಿ ಏಷ್ಯನ್ ಡೆವಲಪ್​ಮೆಂಟ್ ಬ್ಯಾಂಕ್​(ಎಡಿಬಿ) 2.2 ಶತಕೋಟಿ ಡಾಲರ್​ಗಳ ನೆರವಿನ ಭರವಸೆಯನ್ನು ನೀಡಿದೆ.

    ಎಡಿಬಿಯ ಪ್ರೆಸಿಡೆಂಟ್​ ಮಸಾಟ್ಸುಗು ಅಸಕಾವಾ ಅವರು ಶುಕ್ರವಾರ ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಭರವಸೆಯನ್ನು ಕೊಟ್ಟಿದ್ದಾರೆ. ಈ ಸೋಂಕಿನ ಸಂಬಂಧ ಭಾರತ ಸರ್ಕಾರದ ನಿರ್ಣಾಯಕ ಪಾತ್ರ ಮತ್ತು ಪ್ರಾದೇಶಿಕವಾಗಿ ತೆಗೆದುಕೊಂಡಿರುವ ನಿರ್ಣಯಗಳ ಮಹತ್ವವನ್ನು ಮನಗಂಡು, ಭಾರತದ ತುರ್ತು ಅಗತ್ಯಗಳಿಗೆ ತತ್​​ಕ್ಷಣದ ನೆರವಾಗಿ 2.2 ಶತಕೋಟಿ ಡಾಲರ್ (16,500 ಕೋಟಿ ರೂಪಾಯಿ) ನೆರವಿನ ಪ್ಯಾಕೇಜ್ ಸಿದ್ಧಪಡಿಸಿ ಒದಗಿಸಲಾಗುವುದು ಎಂದು ಅಸಕಾವಾ ಹೇಳಿದ್ದಾರೆ.

    ಈ ಹಣವನ್ನು ಭಾರತ ಸರ್ಕಾರ ಆರೋಗ್ಯಕ್ಷೇತ್ರದ ಸಿಬ್ಬಂದಿ, ಬಡವರು, ಮಹಿಳೆಯರು ಮತ್ತು ಅನೌಪಚಾರಿಕ ಕ್ಷೇತ್ರದ ಅಸಂಘಟಿತ ಕಾರ್ಮಿಕರ ಒಳಿತಿಗಾಗಿ ಬಳಸಬೇಕು. ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಚೇತರಿಕೆಗಾಗಿ ಬಳಸಬೇಕು ಮತ್ತು ಹಣಕಾಸಿನ ಕ್ಷೇತ್ರದ ಒಳಿತಿಗಾಗಿ ಬಳಸಬೇಕು ಎಂದು ಅಸಕಾವಾ ಸ್ಪಷ್ಟಪಡಿಸಿದ್ದಾರೆ.

    ಭಾರತದ ಮಟ್ಟಿಗೆ ನಾವು ಎಲ್ಲ ರೀತಿಯ ಹಣಕಾಸಿನ ವ್ಯವಹಾರದ ಆಯ್ಕೆಯನ್ನು ಪರಿಗಣಿಸುತ್ತೇವೆ. ಅಗತ್ಯವಿದ್ದಲ್ಲಿ ನೆರವಿನ ಪ್ರಮಾಣವನ್ನು ಹೆಚ್ಚಿಸಲಾಗುವುದು. ತುರ್ತು ನೆರವಿನ ಹೊರತಾಗಿ ನೀತಿ ಆಧಾರಿತ ಸಾಲ ಮತ್ತು ಎಡಿಬಿ ನಿಧಿಗಳನ್ನು ತ್ವರಿತವಾಗಿ ಹಂಚಿಕೆ ಮಾಡಲು ಬಜೆಟ್ ಸಪೋರ್ಟ್​ ಕೂಡ ಭಾರತಕ್ಕೆ ಸಿಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

    ಸೋಂಕು ಹರಡುತ್ತಿರುವುದು ಖಾತರಿಯಾಗುತ್ತಿದ್ದಂತೆ ಭಾರತ ಸರ್ಕಾರ ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿತು. ಅಲ್ಲದೆ, ಉದ್ಯಮಗಳಿಗೆ ತೆರಿಗೆ ಮತ್ತು ಇತರೆ ವಿನಾಯಿತಿ ಕ್ರಮಗಳನ್ನೂ ತೆಗೆದುಕೊಂಡಿತು. ಇದೂ ಅಲ್ಲದೆ, ಮಾರ್ಚ್ 26ರಂದು 1.7 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜನ್ನು ಕೂಡ ಘೋಷಿಸಿತು. ಮೂರುವಾರಗಳ ರಾಷ್ಟ್ರವ್ಯಾಪಿ ಲಾಕ್​ಡೌನ್​ ನ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಪ್ಯಾಕೇಜ್ ಮಹತ್ವದ ಪಾತ್ರವಹಿಸುತ್ತದೆ. ಈ ರೀತಿಯಾಗಿ ಭಾರತ ಸರ್ಕಾರ ತೆಗೆದುಕೊಂಡಿರುವ ಪರಿಹಾರ ಮತ್ತು ರೋಗ ತಡೆ ಉಪಕ್ರಮಗಳು ತ್ವರಿತ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ಅಸಕಾವಾ ಭರವಸೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆರಗಿದವು ಕರಡಿಗಳು: ಇಂದು ಬೆಳ್ಳಂಬೆಳಗ್ಗೆ ನಡೆದ ದಾಳಿ!

    ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts