More

    ಆದರ್ಶ ಗ್ರಾಮ ಯೋಜನೆಯಲ್ಲಿ ಮಾಗಡಿ ತಾಲೂಕಿನ ಹೇಳಿಗೆಹಳ್ಳಿ ಅಭಿವೃದ್ಧಿ

    ಮಾಗಡಿ: ಆದರ್ಶ ಗ್ರಾಮ ಯೋಜನೆಯಲ್ಲಿ ತಾಲೂಕಿನ ಹೇಳಿಗೆ ಹಳ್ಳಿಯನ್ನು 2 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅಗಲಕೋಟೆ ಗ್ರಾಮ ಪಂಚಾಯಿತಿ ಪಿಡಿಒ ಸೋಮಶೇಖರ್ ತಿಳಿಸಿದರು.

    ತಾಲೂಕಿನ ಮಾಡಬಾಳ್ ಹೋಬಳಿ ಅಗಲಕೋಟೆ ಗ್ರಾಪಂ ಕಚೇರಿಯಲ್ಲಿ ಸೋಮವಾರ ನಡೆದ ಕೆಡಿಪಿ. ಸಭೆಯಲ್ಲಿ ಮಾತನಾಡಿ, ಈ ಯೋಜನೆಯಲ್ಲಿ ಗ್ರಾಮದ ರಸ್ತೆ, ಚರಂಡಿ, ಬೀದಿ ದೀಪ ಸೇರಿ ಮೂಲಸೌಕರ್ಯ ಒದಗಿಸುವುದರ ಜತೆಗೆ ಸಮುದಾಯ ಭವನ, ಸೌರವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಗ್ರಾಮವನ್ನು ಎಲ್ಲ ರೀತಿ ಅಭಿವೃದ್ಧಿಗೊಳಿಸಲಾಗುವುದು ಎಂದರು.

    ವಿಶ್ವ ಪರಿಸರ ದಿನದ ಅಂಗವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ 2000 ಸಸಿಗಳನ್ನು ನೆಡಲಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ 5 ಸಾವಿರ ಸಸಿ ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

    ಹುಲಿಕಟ್ಟೆಯಲ್ಲಿರುವ ಪ್ರೌಢಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ಎಸ್‌ಎಸ್ಸೆಸ್ಸೆಸ್ಸಿ ಪರೀಕ್ಷೇ ಬರೆಯಲಿದ್ದು, ಪರೀಕ್ಷೇ ಕೇಂದ್ರವನ್ನು ಸ್ಯಾನಿಟೈಸ್ ಮಾಡಿ ಔಷಧ ಸಿಂಪಡಣೆ ಮಾಡಲಾಗಿದೆ ಎಂದರು.

    ಪಶು ಸಂಗೋಪನೆ ಇಲಾಖೆಯ ವೈದ್ಯೆ ತೇಜಸ್ವಿ ಮಾತನಾಡಿ, ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಿತ್ತನೆ ಬೀಜಗಳ 50 ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

    ರೇಷ್ಮೆ ಇಲಾಖೆ ಚಂದ್ರಶೇಖರ್ ಮಾತನಾಡಿ, ರೇಷ್ಮೆ ಬೆಳೆಯುವ 80 ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ 80 ಚಂದ್ರಿಕೆ, ರೇಷ್ಮೆ ಕಡ್ಡಿ ಮುಂತಾದವುಗಳನ್ನು ಖರೀದಿಸಲು ತಲಾ 15 ಸಾವಿರ ರೂ. ಸಹಾಯಧನ ವಿತರಿಸಲಾಗಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts