More

    ಇಂತಹ ಘಟನೆ ನಡೆಯಬಾರದಿತ್ತು: ನಟಿ ತಾರಾ ಅನುರಾಧ

    ಹಾವೇರಿ: ನಿನ್ನೆ (ಏ.18) ಹುಬ್ಬಳ್ಳಿಯ ಕಾಲೇಜಿನಲ್ಲಿ ಯುವತಿಯ ಹತ್ಯೆ ಹಾಗೂ ಗದಗ ಜಿಲ್ಲೆಯಲ್ಲಿ ನಡೆದ ಎರಡು ಜೋಡಿ ಕೊಲೆ ಪ್ರಕರಣ ಖಂಡನೀಯ, ಇಂತಹ ಘಟನೆ ನಡೆಯಬಾರದಿತ್ತು ಎಂದು ಕನ್ನಡ ಚಿತ್ರರಂಗದ ನಟಿ ತಾರಾ ಅನುರಾಧಾ ಹೇಳಿದರು.

    ಇದನ್ನೂ ಓದಿ: ನೇಹಾ ಕೊಲೆ ಖಂಡಿಸಿ ಭುಗಿಲೆದ್ದ ಆಕ್ರೋಶ, ಎಬಿವಿಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

    ಇಂದು ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಾಂಬ್ ಇಟ್ಟವರನ್ನು ನಮ್ಮ ಬ್ರದರ್ಸ್ ಅಂದರು. ಈ ರೀತಿಯ ಕೊಲೆ ನಡೆಯುತ್ತಿರುವಾಗ ಅವರು ಏನಂತಾರೆ? ಇದು ನಿಜಕ್ಕೂ ಭಯಾನಕ ಕೃತ್ಯ” ಎಂದರು.

    “ಯಾರಿಗೂ ಕಾನೂನಿನ ಬಗ್ಗೆ ಭಯ ಇಲ್ಲವಾಗಿದೆ. ನಮ್ಮ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಲು ಆಗದಿದ್ದರೆ, ಯಾವ ಕಾರಣಕ್ಕೆ ನಿಮ್ಮನ್ನು ಆಯ್ಕೆ ಮಾಡಬೇಕು. ಯುಪಿಎ 280 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿ ಗೆಲ್ಲುತ್ತೇವೆ ಎಂದು ಯಾವ ಧೈರ್ಯದ ಮೇಲೆ ಹೇಳುತ್ತೀರಿ. ಎನ್​ಡಿಎ ಅಭ್ಯರ್ಥಿ ಮೋದಿ ಎಂದು ಧೈರ್ಯದಿಂದ ಹೇಳುತ್ತೇವೆ. ನಿಮ್ಮ ಅಭ್ಯರ್ಥಿ ಯಾರೆಂದು ಯಾಕೆ‌ ಹೇಳುತ್ತಿಲ್ಲ” ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಹೈದರಾಬಾದ್​ನಲ್ಲಿ ರಾಮಭಕ್ತರ ಮೆರವಣಿಗೆ ಟಾರ್ಗೆಟ್​..ಭಕ್ತರು ಎಷ್ಟು ಮಾಂಗಲ್ಯ, ಮೊಬೈಲ್​ ಕಳೆದುಕೊಂಡರು ಗೊತ್ತಾ?

    “ಗ್ಯಾರಂಟಿ ಯೋಜನೆಗಳಿಂದ ಖುಷಿಯಾಗಿದ್ದಾರೆ ಅಂತೀರಿ. ಅವರಿಗೂ ಈಗ ಅರ್ಥವಾಗಿದೆ. ಮಹಿಳೆಯರಿಗೆ ಉಚಿತ ಕೊಟ್ಟು ಗಂಡಸರಿಂದ ದುಪ್ಪಟ್ಟು‌ ವಸೂಲಿ ಮಾಡುತ್ತೀರಿ. ವಿದ್ಯುತ್ ಬಿಲ್‌ ಹೆಚ್ಚಿಸಿದ್ದೀರಿ. ಗೃಹಲಕ್ಷ್ಮೀ ಮನೆಯ ಯಜಮಾನಿ ಎಂದು ಹೇಳಿದ್ದೀರಿ. ಎರಡು ಸಾವಿರ ರೂ. ಇನ್ನೂ ಹಲವರಿಗೆ ಬಂದೇ ಇಲ್ಲ” ಎಂದು ವ್ಯಂಗ್ಯವಾಡಿದರು.

    “ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಅಂತಾ ಹೇಳಲ್ಲ. ನಿಲ್ಲಿಸಲು ಯತ್ನಿಸಿದರೆ ಅದರ ವಿರುದ್ಧ ಹೋರಾಟ ಮಾಡುತ್ತೇವೆ. ರಸ್ತೆಗಳು ಇತರ ಅಭಿವೃದ್ಧಿ ಕೆಲಸ ಸ್ಥಗಿತವಾಗಿವೆ. ಮೋದಿ ಅವರನ್ನು ಬಿಟ್ಟರೆ ಬೇರೆ ಯಾರನ್ನೂ ಪ್ರಧಾನಿ ಎಂದು‌ ಕಲ್ಪಿಸಲೂ ಸಾಧ್ಯವಿಲ್ಲ. ಮೋದಿ ಜಾತ್ಯಾತೀತವಾಗಿ ಇಡೀ ದೇಶವೇ ಒಂದು ಕುಟುಂಬ‌ ಎಂಬ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದುಳಿದ ವರ್ಗದವರಾಗಿರುವ ಅವರು ಎಲ್ಲ ಜಾತಿ, ಧರ್ಮೀಯರನ್ನು ಒಂದೇ ಸಮನಾಗಿ ಕಂಡಿದ್ದಾರೆ” ಎಂದರು.

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts