More

    ಪಾತ್ರವೇ ಪ್ರಧಾನ! ತೂಕವುಳ್ಳ ಕಥೆಗೆ ಸೋನು ಸೈ

    ಪುನೀತ್ ಅಭಿನಯದ ‘ಯುವರತ್ನ’ ಚಿತ್ರ ಏಪ್ರಿಲ್ ಒಂದರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಟಿ ಸೋನು ಗೌಡ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಇಷ್ಟು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿದವರು. ಹೀಗಿರುವಾಗ, ಪೋಷಕ ಪಾತ್ರದಂತಿರುವ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.

    ಇಂಥದ್ದೊಂದು ಪ್ರಶ್ನೆಗೆ ಸೋನು ಏನೆನ್ನುತ್ತಾರೆ ಗೊತ್ತಾ? ‘ನನಗೆ ನಾಯಕಿ ಪಾತ್ರವೇ ಮಾಡಬೇಕು ಅಂತೇನಿಲ್ಲ. ತೂಕ ಇರುವ ಯಾವುದೇ ಪಾತ್ರ ಮಾಡುವುದಕ್ಕೆ ನಾನು ಸಿದ್ಧ. ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ನಾನು ಮತ್ತು ಧನಂಜಯ್ ಒಮ್ಮೆ ಮಾತನಾಡಿಕೊಂಡಿದ್ದೆವು. ಬರೀ, ನಾಯಕ ಅಥವಾ ನಾಯಕಿ ಪಾತ್ರ ಮಾಡಬೇಕು ಎನ್ನುವುದಕ್ಕಿಂತ, ಒಳ್ಳೆಯ ಪಾತ್ರ ಸಿಕ್ಕಾಗ ಒಪ್ಪಿಕೊಳ್ಳುವುದಕ್ಕೆ ಹಿಂಜರಿಯಬಾರದು. ಬೇರೆ ಪಾತ್ರಗಳಲ್ಲೂ ನಮ್ಮ ಛಾಪು ಮೂಡಿಸಬೇಕು ಎಂದು ಮಾತಾಡಿದ್ದೆವು. ಈಗ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ’ ಎನ್ನುತ್ತಾರೆ ಸೋನು.

    ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ ಒಳ್ಳೆಯ ಪಾತ್ರದ ಜತೆಗೆ ಪುನೀತ್ ರಾಜಕುಮಾರ್ ಸಹ ಒಬ್ಬರು ಕಾರಣ ಎಂದು ಹೇಳುವುದಕ್ಕೆ ಅವರು ಮರೆಯುವುದಿಲ್ಲ. ‘ಅಪು್ಪ ಅವರ ಜತೆಗೆ ನಟಿಸುವ ಅವಕಾಶ ಮತ್ತೆ ಸಿಗಬಹುದು ಅಂದುಕೊಂಡಿರಲಿಲ್ಲ. ಈ ಹಿಂದೆ ಅವರ ಜತೆ ‘ರಾಮ್ ಚಿತ್ರದಲ್ಲಿ ನಟಿಸಿದ್ದೆ. ಈಗ ಈ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಪಾತ್ರದಲ್ಲಿ ಎಲ್ಲ ತರಹದ ಎಮೋಷನ್ ಸಹ ಇತ್ತು. ನನ್ನದೊಂದೇ ಪಾತ್ರವಲ್ಲ. ಚಿತ್ರದಲ್ಲಿ ಹಲವು ಪಾತ್ರಗಳಿದ್ದು, ಪ್ರತಿ ಪಾತ್ರ ಸಹ ಎದ್ದು ನಿಲ್ಲುತ್ತದೆ’ ಎನ್ನುತ್ತಾರೆ ಸೋನು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts