ಟರ್ಕಿ: ಟಾಲಿವುಡ್ ನಟಿ ಸಮಂತಾ, ನಟ ವಿಜಯ್ ದೇವರಕೊಂಡ ಅವರೊಡನೆ ಟರ್ಕಿಯಲ್ಲಿ ಕ್ಲಿಕ್ಕಿಸಿದ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮಿಬ್ಬರ ಸ್ನೇಹದ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಈ ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದೆ ಡ್ರೆಸ್ ಕೋಡ್
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟ ವಿಜಯ್ ದೇವರಕೊಂಡ ಜತೆ ಇರುವ ಫೋಟೋವನ್ನು ಪೋಸ್ಟ್ ಮಾಡಿರುವ ನಟಿ ಸಮಂತಾ, “ನೀನು ಅತ್ಯತ್ತಮವಿದ್ದಾಗ ನಿನ್ನನ್ನು ನೋಡುತ್ತಾರೆ, ನೀನು ಸೋತಾಗ ನಿನ್ನನ್ನು ನೋಡುತ್ತಾರೆ, ನೀನು ಗೆದ್ದಾಗ ನಿನ್ನನ್ನು ನೋಡುತ್ತಾರೆ, ನೀನು ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ ನಿನ್ನನ್ನು ನೋಡುತ್ತಾರೆ. ಕೆಲವು ಸ್ನೇಹಿತರು ಸೂಕ್ಷ್ಮವಾಗಿ ನಿಲ್ಲುತ್ತಾರೆ” ಎಂದು ಹ್ಯಾಶ್ಟ್ಯಾಗ್ ಬಳಸಿ ಖುಷಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸಮಂತಾ ಅವರ ಪೋಸ್ಟ್ ನೋಡಿದ ವಿಜಯ್ ದೇವರಕೊಂಡ “ನೆಚ್ಚಿನ ಹುಡುಗಿ” ಎಂದು ಕಮೆಂಟ್ ಮಾಡಿದ್ದಾರೆ.
ಸಮಂತಾ ಮತ್ತು ವಿಜಯ್ ದೇವರಕೊಂಡ ಟರ್ಕಿಯ ಕೆಫೆಯೊಂದರಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದು, ತಮ್ಮ ಮುಂದಿನ ‘ಖುಷಿ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದಾರೆ. ಲವ್, ರೊಮ್ಯಾನ್ಸ್ ಜಾನರ್ ಅಡಿಯಲ್ಲಿ ರೂಪುಗೊಂಡಿರುವ ಖುಷಿ ಸಿನಿಮಾ ಈಗಾಗಲೇ ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ಹಠ ಮಾಡುವ ಮಕ್ಕಳು ಬೇಡಾ! ಉಸಿರುಗಟ್ಟಿಸಿ ಅವಳಿ ಮಕ್ಕಳನ್ನು ಕೊಂದ ಪಾಪಿ ತಂದೆ
ಕಳೆದ ಕೆಲ ದಿನಗಳಿಂದ ‘ಖುಷಿ’ ಚಿತ್ರದ ಚಿತ್ರೀಕರಣಕ್ಕಾಗಿ ಟರ್ಕಿಯಲ್ಲಿ ವಾಸ್ತವ್ಯ ಹೂಡಿರುವ ಚಿತ್ರತಂಡ, ಈಗಾಗಲೇ ಚಿತ್ರದ 60 ಭಾಗದಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಈ ಚಿತ್ರ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಾತ್ಕಾಲಿಕ ದಿನಾಂಕವನ್ನು ಘೋಷಿಸಿದೆ. ಕಳೆದ ತಿಂಗಳಷ್ಟೇ ಚಿತ್ರದ ‘ನಾ ರೋಜಾ ನುವ್ವೆ’ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಗೊಂಡಿದೆ.