More

    ಪ್ರಿಯಾಂಕಾ ಚೋಪ್ರಾ ಬೆನ್ನ ಹಿಂದಿದ್ದಾಳೆ ಮಹಾಕಾಳಿ; ವಿಶೇಷ ವಿನ್ಯಾಸದ ದಿರಿಸು ತೊಟ್ಟ ಪಿಗ್ಗಿ

    ಮುಂಬೈ: ನಟಿಮಣಿಯರು ನಟನೆಯ ಮೂಲಕ ಗಮನಸೆಳೆಯುವುದರ ಜತೆಗೆ ವಿವಿಧ ಬಗೆಯ ವಿನ್ಯಾಸದ ದಿರಿಸಿನ ಮೂಲಕವೂ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಪ್ರಿಯಾಂಕಾ ಚೋಪ್ರಾ ಒಂದು ಹೆಜ್ಜೆ ಮುಂದೇ ಎಂದರೆ ಅತಿಶಯೋಕ್ತಿ ಏನಲ್ಲ. ಏಕೆಂದರೆ, ಈ ಹಿಂದೆ ಹಲವು ಸಿನಿಮೋತ್ಸವಗಳಿಗೆ ಹೋದ ಸಂದರ್ಭದಲ್ಲಿ ಅವರು ಧರಿಸಿದ ಉಡುಪಿನ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದ್ದರು. ಇದೀಗ ಮಹಾಕಾಳಿ ಮುಖಭಾವ ಇರುವ ವಿಶೇಷ ದಿರಿಸನ್ನು ಧರಿಸಿರುವ ಫೋಟೋ ವೈರಲ್ ಆಗಿದೆ.

    ಇದನ್ನೂ ಓದಿ: ಆಸ್ಪತ್ರೆಗೆ ಸೆಟ್ ಪ್ರಾಪರ್ಟಿ ದಾನ ಮಾಡಿದ ರಾಧೇ ಶ್ಯಾಮ್ ತಂಡ

    ಹೌದು, ಸೋಷಿಯಲ್ ಮೀಡಿಯಾದಲ್ಲಿ ಹೊಸದಾದ ಫೋಟೋವೊಂದನ್ನು ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ್ದು, ಆ ಫೋಟೋದಲ್ಲಿ ಪ್ರಿಯಾಂಕಾ ಅವರ ಬೆನ್ನ ಹಿಂದೆ ಕಾಳಿಯ ಫೋಟೋ ಸಹ ಇದೆ. ಅದಕ್ಕೆ ತಕ್ಕಂತೆ ಒಡೆವೆಯ, ಹೂವಿನ ಮಾಲೆಯೂ ಫೋಟೋದಲ್ಲಿ ಕಾಣಿಸುತ್ತದೆ. ಸದ್ಯ ಈ ಫೋಟೋ ಹಲವು ವಿಚಾರಕ್ಕೆ ಚರ್ಚೆಯಲ್ಲಿದ್ದು, ಪರ ವಿರೋಧವೂ ವ್ಯಕ್ತವಾಗುತ್ತಿದೆ. ಕೆಲವು ನೆಟ್ಟಿಗರು ಇದು ಹಿಂದೂ ದೇವತೆಗೆ ಮಾಡುತ್ತಿರುವ ಅವಮಾನ ಎಂದರೆ, ಇನ್ನು ಕೆಲವು ಜನ ಭಕ್ತಿಯ ಪರಾಕಾಷ್ಟೆ ಎಂದಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಬೆನ್ನ ಹಿಂದಿದ್ದಾಳೆ ಮಹಾಕಾಳಿ; ವಿಶೇಷ ವಿನ್ಯಾಸದ ದಿರಿಸು ತೊಟ್ಟ ಪಿಗ್ಗಿಇದ್ಯಾವುದಕ್ಕೂ ಕೇರ್ ಮಾಡದ ಪ್ರಿಯಾಂಕಾ, ತಮ್ಮ ಪಾಡಿಗೆ ತಾವಿದ್ದಾರೆ. ಸದ್ಯ ನ್ಯೂಯಾರ್ಕ್​ನಲ್ಲಿ ಪತಿ ನಿಕ್ ಜೋನಸ್ ಜತೆಗಿರುವ ಪ್ರಿಯಾಂಕಾ, ಭಾರತದಲ್ಲಿನ ಕೋವಿಡ್ ಪರಿಸ್ಥಿತಿಗೂ ಮಿಡಿದಿದ್ದಾರೆ. ಅಷ್ಟೇ ಅಲ್ಲ ನಿಧಿ ಸಂಗ್ರಹಣಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​) 

    ಇದನ್ನೂ ಓದಿ: ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts