More

    ಪ್ರತಿ ಬಾರಿ ವಿಮಾನ ನಿಲ್ದಾಣದಲ್ಲಿ ಹಿಂಸೆ! ಪ್ರಧಾನಿ ಮೋದಿಗೆ ಹಿರಿಯ ನಟಿಯ ದೂರು

    ಮುಂಬೈ: ಹಿರಿಯ ನಟಿ ಮತ್ತು ಭರತನಾಟ್ಯಂ ಕಲಾವಿದೆಯಾದ ಸುಧಾ ಚಂದ್ರನ್​ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗವಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಪ್ರತಿ ಬಾರಿ ತಾವು ಪ್ರಯಾಣಿಸುವಾಗ ವಿಮಾನ ನಿಲ್ದಾಣದಲ್ಲಿ ತಮಗೆ ಹಿಂಸೆಯುಂಟಾಗುತ್ತಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದ್ದಾರೆ.

    ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ಸುಧಾ ಚಂದ್ರನ್​, ಪ್ರೋಸ್ಥೆಟಿಕ್​ ಲಿಂಬ್​ ಅರ್ಥಾತ್​ ಕೃತಕ ಕಾಲಿನ ಸಹಾಯದಿಂದ ತಮ್ಮ ನೃತ್ಯ ಮತ್ತು ನಟನೆಯ ಬದುಕಿಗೆ ಮರಳಿ ಇತಿಹಾಸ ರಚಿಸಿದ್ದಾರೆ. ಇವರ ಜೀವನಗಾಥೆಯಾದ ತೆಲುಗು ಚಿತ್ರ ‘ಮಯೂರಿ’ಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಆದರೆ ಪ್ರತಿ ಬಾರಿ ವಿಮಾನ ನಿಲ್ದಾಣಕ್ಕೆ ಹೋದಾಗ ಭದ್ರತಾ ಅಧಿಕಾರಿಗಳು ಅವರ ಕೃತಕ ಕಾಲನ್ನು ಬಿಚ್ಚಿ ತೋರಿಸಲು ಕೇಳುತ್ತಾರೆ. ಇದು ಬಹಳ ಹಿಂಸೆ ಮತ್ತು ನೋವುಂಟುಮಾಡಿದೆ ಎಂದು ಸುಧಾ ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by Sudhaa Chandran (@sudhaachandran)

    ಪ್ರಧಾನಿ ಮೋದಿಯನ್ನು ಸಂಬೋಧಿಸುತ್ತಾ, “ನಾನು ಕೃತಕ ಕಾಲಿನೊಂದಿಗೆ ನರ್ತಿತಿ ದೇಶಕ್ಕೆ ಕೀರ್ತಿ ತಂದಿದ್ದೇನೆ. ಆದರೆ ವಿಮಾನ ನಿಲ್ದಾಣದಲ್ಲಿ ಪ್ರತಿ ಬಾರಿ ನನ್ನನ್ನು ನಿಲ್ಲಿಸುತ್ತಾರೆ. ಸೆಕ್ಯುರಿಟಿ ಅಧಿಕಾರಿಗಳಿಗೆ ನನ್ನ ಕಾಲಿನ ಮೇಲೆ ಇಟಿಡಿ ಪರೀಕ್ಷೆ(ಸ್ಫೋಟಕ ವಸ್ತು ಪತ್ತೆ ಮಾಡುವ ಪರೀಕ್ಷೆ) ಮಾಡಿ ಎಂದು ಎಷ್ಟು ಮನವಿ ಮಾಡಿದರೂ ಒಪ್ಪುವುದಿಲ್ಲ. ನನ್ನ ಕೃತಕ ಕಾಲನ್ನು ಕಳಚಿ ತೋರಿಸಲು ಕೇಳುತ್ತಾರೆ. ಮೋದಿಜೀ, ಇದೇನು ನಮ್ಮ ದೇಶದ ಸ್ಥಿತಿ? ಇದು ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ನಡೆಸಿಕೊಳ್ಳುವ ರೀತಿಯೇ?” ಎಂದು ಭಾವುಕವಾಗಿ ಪ್ರಶ್ನಿಸಿದ್ದಾರೆ.

    ಜೊತೆಗೆ, ಹಿರಿಯ ನಾಗರೀಕರಿಗೆ ಐಡಿ ಕಾರ್ಡ್​ ನೀಡುವಂತೆ ಕೃತಕ ಕಾಲು ಹೊಂದಿರುವವರಿಗೂ ಒಂದು ಕಾರ್ಡ್​ ನೀಡಿ ಅವರ ಪ್ರಯಾಣಕ್ಕೆ ಅನುಕೂಲ ಒದಗಿಸಬೇಕೆಂದೂ ಆಗ್ರಹಿಸಿರುವ ಸುಧಾ ಚಂದ್ರನ್​, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದಿದ್ದಾರೆ. (ಏಜೆನ್ಸೀಸ್)

    ಯುಪಿ ಸರ್ಕಾರದ ಪೋಸ್ಟರ್​ನಲ್ಲಿ ವಿಪಕ್ಷ ನಾಯಕ ಅಖಿಲೇಶ್ ಯಾದವ್​ ಚಿತ್ರ!

    ಚೀನಾದಲ್ಲಿ ಮತ್ತೆ ಕರೊನಾತಂಕ: ಶಾಲೆಗಳು ಬಂದ್​, ವಿಮಾನಯಾನ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts