More

    ನಟಿ ಚಂದನಾ ಆತ್ಮಹತ್ಯೆ ಪ್ರಕರಣ: ಪ್ರಿಯಕರ ದಿನೇಶ್ ಅರೆಸ್ಟ್

    ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತ ನಟಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಸದ್ದುಗುಂಟೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಚಂದನಾಳನ್ನು ವಂಚಿಸಿದ್ದ ಆಕೆಯ ಪ್ರಿಯಕರ ದಿನೇಶ್ ಪ್ರಮುಖ ಆರೋಪಿ.

    ದಿನೇಶ್ ಮತ್ತು ಆತನ ಕುಟುಂಬದವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗುತ್ತಿದ್ದಂತೆ ಎಲ್ಲರೂ ತಲೆಮರೆಸಿಕೊಂಡಿದ್ದರು. ಸದ್ದುಗುಂಟೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು ಚಿಕ್ಕಮಗಳೂರು ಕಾಡಿನಿಂದ ದಿನೇಶ್​ನನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಮೂಲಗಳು ತಿಳಿಸಿವೆ.

    ಇದನ್ನೂ ಓದಿ:  ಪ್ರಿಯಕರನ ವಂಚನೆಯನ್ನು ಫೇಸ್‌ಬುಕ್‌ನಲ್ಲೂ ತೋಡಿಕೊಂಡಿದ್ದ ನಟಿ ಚಂದನಾ

    ನಟಿ ಚಂದನಾ ಮೇ ತಿಂಗಳ ಕೊನೆಯಲ್ಲಿ ಸೆಲ್ಫಿ ವಿಡಿಯೋ ಮಾಡುತ್ತ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರಿಯತಮ ದಿನೇಶ್, ಆತನ ತಂದೆ ಲೋಕಪ್ಪ ಗೌಡ, ತಾಯಿ ಗಾಯತ್ರಿ, ಚಿಕ್ಕಮ್ಮ ಶೈಲಾ, ಸೋದರಮಾವ ಸ್ವಾಮಿ ವಿರುದ್ಧ ಆಕೆಯ ಪಾಲಕರು ದೂರು ದಾಖಲಿಸಿದ್ದರು.

    ನಟಿ ಚಂದನಾ ಆತ್ಮಹತ್ಯೆಗೆ ಇಲ್ಲಿದೆ ನೋಡಿ ನಿಜವಾದ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts