More

    ಹೊಸ ವರ್ಷಕ್ಕೆ ಹೊಸ ಕನಸು ಕಾಣುತ್ತಿರುವ ‘ಪೆಂಟಗನ್’ ನಟಿ ಅನುಷಾ

    ಹೊಸ ವರ್ಷದ ಸಂಭ್ರಮದಲ್ಲಿರುವ ನಟಿ ಅನುಷಾ ಈ ವರ್ಷ ಹೊಸ ಕನಸು ಕಾಣುತ್ತಿದ್ದಾರೆ. ಸಂಭ್ರಮ, ಖುಷಿ ಹಾಗೂ ಹೊಸ ಭರವಸೆಗಳ ಬಗ್ಗೆ ಅನುಷಾ, ‘ಸಕಲೇಶಪುರ್ ಅಲ್ಲಿ ್ಯಾಮಿಲಿ ಜತೆ ರಾತ್ರಿ ಪಾರ್ಟಿ. ಇವತ್ತು ಬೆಳಗ್ಗೆ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ದೇವರ ದರ್ಶನ, ಆಶೀರ್ವಾದ ಪಡೆದಿದ್ದೇನೆ. 2023ರಲ್ಲಿ ‘ಪೆಂಟಗನ್’ ಎಂಬ ಒಂದು ಸಿನಿಮಾ ರಿಲೀಸ್ ಆಗಿತ್ತು. ಅದರ ಜತೆಗೆ ‘ಸಹಾರ’, ‘ದಿ ವೈರಸ್’ ಹಾಗೂ ‘ಬೆಂಗಳೂರು ಇನ್’ ಸಿನಿಮಾಗಳ ಶೂಟಿಂಗ್ ಮಾಡಿದ್ದೇನೆ. ಈ ವರ್ಷ ಈ ಸಿನಿಮಾಗಳು ರಿಲೀಸ್ ಆಗುವ ನಿರೀಕ್ಷೆಯ ಖುಷಿಯಲ್ಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

    ಹೊಸ ವರ್ಷಕ್ಕೆ ಹೊಸ ಕನಸು ಕಾಣುತ್ತಿರುವ ‘ಪೆಂಟಗನ್’ ನಟಿ ಅನುಷಾ

    ಈ ವರ್ಷ ಇನ್ನೂ ಹೆಚ್ಚೆಚ್ಚು ಒಳ್ಳೆ ಸಿನಿಮಾಗಳನ್ನು ಮಾಡಬೇಕು ಎಂದುಕೊಂಡಿರುವ ಅನುಷಾ, ‘ಜ.8ರಿಂದ ಶೂಟ್ ಪ್ಲಾನ್ ಆಗಿದೆ. ಈಗ ಜನ ನನ್ನನ್ನು ಗುರುತಿಸುತ್ತಾರೆ. ಅಭಿಮಾನ ತೋರಿಸುತ್ತಾರೆ. ಇಂಟಸ್ಟ್ರಿಗೆ ಬಂದು 4 ವರ್ಷಗಳಾದ ಕಾರಣ ಇನ್ನೂ ಒಳ್ಳೆಯ ಕಂಟೆಂಟ್ ಇರುವಂಥ ಸಿನಿಮಾಗಳ ಮೂಲಕ ಛಾಪು ಮೂಡಿಸಬೇಕು ಎನ್ನುವುದೇ ಈ ವರ್ಷದ ಕನಸು. ಒಳ್ಳೊಳ್ಳೆ ತಂಡದ ಜತೆ, ಸ್ಟಾರ್ ಕಲಾವಿದರ ಜತೆ ನಟಿಸಬೇಕು. ಜನರ ಇನ್ನಷ್ಟು ಪ್ರೀತಿ ಗಳಿಸಬೇಕು ಎನ್ನುವ ಆಸೆಯಿದೆ ’ಎನ್ನುತ್ತಾರೆ.

    ಹೊಸ ವರ್ಷಕ್ಕೆ ಹೊಸ ಕನಸು ಕಾಣುತ್ತಿರುವ ‘ಪೆಂಟಗನ್’ ನಟಿ ಅನುಷಾ

    ಇನ್ನು ೆಬ್ರುವರಿಯಲ್ಲಿ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿರುವ ನಟಿ, ‘‘ಸಹಾರ’ ಎಂಬ ವಿಭಿನ್ನ ಪಾತ್ರದ ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಮನಾಲಿ ಸೇರಿ ಹಲವೆಡೆ ಶೂಟಿಂಗ್ ಪೂರ್ಣಗೊಂಡಿದೆ. ಇನ್ನು ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿ ಸ್ಟ್ರಾಂಗ್ ಪಾತ್ರ ಮಾಡುತ್ತಿದ್ದೇನೆ. ಅದರಲ್ಲಿ ಬಂದೂಕು ಹಿಡಿದು ಶೂಟ್ ಮಾಡಿದ್ದೇನೆ, ಬುಲೆಟ್ ಓಡಿಸಿದ್ದೇನೆ. ಆ ಸಿನಿಮಾ ೆಬ್ರುವರಿಯಲ್ಲಿ ರಿಲೀಸ್ ಆಗಲಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts