More

    ನನಗೆ ಖಾಯಿಲೆ ಇದೆ, ಈ ರೀತಿ ಬಾಡಿ ಶೇಮಿಂಗ್ ಮಾಡಿ ಗೇಲಿ ಮಾಡಬೇಡಿ ಎಂದು ಕಣ್ಣೀರಿಟ್ಟ ನಟಿ

    ಮುಂಬೈ: ಸೋಶಿಯಲ್​​ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಹಾಕಿದ್ರೆ ಸಾಕು ಗೇಲಿ ಮಾಡುವವರ ಕುರಿತಾಗಿ ಬೇಸರ ಹೊರ ಹಾಕಿದ ಮಲಯಾಳಂ ನಟಿ ಅನ್ನಾ ರಾಜನ್. ತನ್ನ ಆರೋಗ್ಯದ ಸಮಸ್ಯೆಯನ್ನು ಬಹಿರಂಗಪಡಿಸುವ ಮೂಲಕ ತನ್ನನ್ನು ಲೇವಡಿ ಮಾಡುವ ಬಾಡಿ ಶೇಮಿಂಗ್ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ನಟಿ ಅನ್ನಾ ರಾಜನ್ ತನ್ನ ಆರೋಗ್ಯದ ಸಮಸ್ಯೆಯನ್ನು ಬಹಿರಂಗಪಡಿಸುವ ಮೂಲಕ ತನ್ನನ್ನು ಲೇವಡಿ ಮಾಡುವ ಬಾಡಿ ಶೇಮಿಂಗ್ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ನಾನು ಆಟೋಇಮ್ಯೂನ್ ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿದ್ದೇನೆ. ಆದ್ದರಿಂದ ದೇಹವು ಕೆಲವೊಮ್ಮೆ ದಪ್ಪ ಮತ್ತು ತೆಳ್ಳಗಿರುತ್ತದೆ. ಮುಖದ ಹಿಗ್ಗುವಿಕೆ, ಬಿಗಿತ ಮತ್ತು ಕೀಲುಗಳಲ್ಲಿ ನೋವು ಈ ರೋಗದ ಲಕ್ಷಣಗಳಾಗಿವೆ. ಆದರೆ ನಾನು ಹೀಗೆ ಆದರೂ ಕೂಡಾ ಏನನ್ನೂ ಮಾಡುವುದನ್ನು ನಿಲ್ಲಿಸುವುದಿಲ್ಲ. ನಾನು ಈ ವೀಡಿಯೊವನ್ನು ಪೋಸ್ಟ್ ಮಾಡಿದಾಗ, ಜನರು ಕಾಮೆಂಟ್ ಮಾಡುವುದನ್ನು ನಾನು ನೋಡಿದೆ. ಇಂತಹ ಕಾಮೆಂಟ್‌ಗಳಿಗೆ ಇಷ್ಟೊಂದು ಲೈಕ್‌ಗಳು ಬರುತ್ತಿರುವುದು ನೋವಿನ ಸಂಗತಿ. ನಾನು ಮನೆಯಲ್ಲಿ ಏನೂ ಮಾಡದೆ ಕುಳಿತುಕೊಳ್ಳಲು ಬಯಸುವುದಿಲ್ಲ ಎಂದು ಹೇಳುವ ಮೂಲಕವಾಗಿ ಬಾಡಿಶೇಮಿಂಗ್​ ಮಾಡುವವರ ಕುರಿತಾಗಿ ಬೇಸರ ಹೊರ ಹಾಕಿದ್ದಾರೆ. ನೃತ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

    ನನ್ನ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದಗಳು. ಬಿಗಿಯಾದ ಬಟ್ಟೆ ಮತ್ತು ಬಿಸಿ ವಾತಾವರಣದಿಂದಾಗಿ, ನನ್ನ ನೃತ್ಯವು ಕೆಲವು ಸ್ಟೇಪ್ಸ್​​ಗಳಿಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೆ, ನಾನು ವೃತ್ತಿಪರ ಡ್ಯಾನ್ಸರ್ ಅಲ್ಲ. ಆದರೂ ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ ಮತ್ತು ನಾನು ಸಂತೋಷವಾಗಿದ್ದೇನೆ. ಮುಂದಿನ ಬಾರಿ ನಾನು ಇದನ್ನು ಮೀರಿ ನೃತ್ಯ ಮಾಡಲು ಬಯಸುತ್ತೇನೆ ಎಂದು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

    ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts