More

    ನಟಿ ವಿಜಯಶಾಂತಿ ದೆಹಲಿಯಲ್ಲಿ ಬಿಜೆಪಿ ಸೇರಿದ್ರು..

    ನವದೆಹಲಿ: ನಟಿ, ರಾಜಕಾರಣಿ ವಿಜಯಶಾಂತಿ ಇಂದು ದೆಹಲಿಯಲ್ಲಿ ಬಿಜೆಪಿಗೆ ಮರುಸೇರ್ಪಡೆಗೊಂಡರು.ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಕುಮಾರ್ ಮತ್ತು ಇತರೆ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ನಿನ್ನೆಯಷ್ಟೇ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

    ಇಂದು ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡ ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ದಕ್ಷಿಣ ಭಾರತದಲ್ಲಿ ಲೇಡಿ ಅಮಿತಾಭ್ ಎಂದೇ ಪ್ರಸಿದ್ಧರಾದ ವಿಜಯಶಾಂತಿ, 1997ರಲ್ಲಿ ಬಿಜೆಪಿ ಸೇರಿದ್ದರು. 1998ರಲ್ಲಿ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಕಾರ್ಯದರ್ಶಿಯಾಗಿದ್ದ ಅವರು 2008ರ ವೇಳೆಗೆ ಬಿಜೆಪಿ ಬಿಟ್ಟಿದ್ದರು.

    ಇದನ್ನೂ ಓದಿ: ತಿಗಳರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ; ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಆಗ್ರಹ

    2009ರಲ್ಲಿ ತಲ್ಲಿ ತೆಲಂಗಾಣ ಎಂಬ ರಾಜಕೀಯ ಪಕ್ಷ ಹುಟ್ಟುಹಾಕಿದರು. ಇದನ್ನು ಬಳಿಕ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​)ಯಲ್ಲಿ ವಿಲೀನಗೊಳಿಸಿದರು. 2009ರ ಲೋಕಸಭೆ ಚುನಾವಣೆಯಲ್ಲಿ ಟಿಆರ್​ಎಸ್​ ಟಿಕೆಟ್​ನಲ್ಲಿ ಮೇಡಕ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು. 2011ರಲ್ಲಿ ತೆಲಂಗಾಣ ಹೋರಾಟದ ವೇಳೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರಿಯಾದ ಕ್ರಮದಲ್ಲಿಲ್ಲ ಎಂದು ಇದು ತಿರಸ್ಕೃತವಾಗಿತ್ತು. 2014ರಲ್ಲಿ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಜತೆಗೆ ಭಿನ್ನಮತ ಮೂಡಿ ಕಾಂಗ್ರೆಸ್ ಸೇರಿ ಮೇಡಕ್​ನಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. (ಏಜೆನ್ಸೀಸ್)

    FACT CHECK | ಪ್ರತಿಭಟನಾ ನಿರತ ರೈತರು ತಿರಂಗಾಕ್ಕೆ ಅವಮಾನ ಮಾಡಿದ್ರಾ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts