ಸಂಸದ ತೇಜಸ್ವಿ ಸೂರ್ಯಾರನ್ನು ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿದ ನಟ ಸಿದ್ದಾರ್ಥ್!

blank

ಚೆನ್ನೈ: ಬಹುಭಾಷಾ ನಟ ಸಿದ್ದಾರ್ಥ್ ಅವರು ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯಾ ಅವರನ್ನು, ಗಲ್ಲು ಶಿಕ್ಷೆಗೆ ಗುರಿಯಾಗಿ ಸತ್ತಿರುವ ಉಗ್ರ ಅಜ್ಮಲ್ ಕಸಬ್​ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅವರು ಇಂದು ಮಾಡಿದ್ದ ಟ್ವೀಟ್ ವೈರಲ್ ಆಗುತ್ತಿದ್ದಂತೆ ಆ ಟ್ವೀಟ್​ನ್ನು ಡಿಲೀಟ್ ಮಾಡಿದ್ದಾರೆ.

ಕರೊನಾ ವಿಷಯವಾಗಿ ಬೆಂಗಳೂರು ಬಿಬಿಎಂಪಿ ವಾರ್​ರೂಮ್​​ನಲ್ಲಿ ನಡೆಯುತ್ತಿದೆ ಎನ್ನಲಾದ ಬೆಡ್ ಹಗರಣದ ಬಗ್ಗೆ ತೇಜಸ್ವಿ ಸೂರ್ಯ ಗಮನ ಸೆಳೆದು, ವಾರ್​ರೂಮ್​ನಲ್ಲಿ ಹೆಚ್ಚು ಮುಸ್ಲಿಂರೇ ಕೆಲಸ ಮಾಡುತ್ತಿದ್ದಾರೆ, ಇದನ್ನೇನು ಮದರಸಾ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಪರ ವಿರೋಧದ ಚರ್ಚೆಗಳು ಆರಂಭವಾಗಿದ್ದವು. ಇದನ್ನು ಖಂಡಿಸುವ ಭರದಲ್ಲಿ ನಟ ಸಿದ್ದಾರ್ಥ್ ಅವರು ‘ಅಜ್ಮಲ್ ಕಸಬ್​ಗಿಂತ ಹತ್ತು ವರ್ಷ ಚಿಕ್ಕವನಾದ ತೇಜಸ್ವಿ ಸೂರ್ಯ ಕಸಬ್​ಗಿಂತೂ ಅಪಾಯಕಾರಿ’ ಎಂದು ಟ್ವೀಟ್ ಮಾಡಿದ್ದರು.

ಒಬ್ಬ ಜನಪ್ರತಿನಿಧಿಯನ್ನು ಉಗ್ರನಿಗೆ ಹೋಲಿಸಿ ಮಾತನಾಡಿದ್ದಕ್ಕೆ ನೆಟ್ಟಿಗರು ಸಿದ್ದಾರ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಎಚ್ಚೆತ್ತುಕೊಂಡು ಸಿದ್ದಾರ್ಥ್ ತಮ್ಮ ವಿವಾದಾತ್ಮಕ ಟ್ವೀಟ್​ನ್ನು ಅಳಿಸಿ ಹಾಕಿದ್ದಾರೆ.

ಕಾಂಗ್ರೆಸ್ ಯುವ ಮುಖಂಡ ನಲಪಾಡ್ ಪೊಲೀಸ್ ವಶಕ್ಕೆ!; ಹೈಗ್ರೌಂಡ್ಸ್​ನಲ್ಲಿ ಹೈಡ್ರಾಮಾ.. ಆಮೇಲೇನಾಯ್ತು?

ಕರೊನಾದಿಂದ ಮನೆಯಲ್ಲೇ ಕೂತು ಕೂತು ಹೊಟ್ಟೆ ಬರಿಸಿಕೊಂಡ ಹಾಲಿವುಡ್ ನಟ ವಿಲ್ ಸ್ಮಿತ್!

Share This Article

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಹಾಗಾದ್ರೆ ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…