More

    ಹಿರಿಯ ನಟಿ ಲೀಲಾವತಿ ನಿಧನ: ವಿನೋದ್​ ರಾಜ್​​ ಬಗ್ಗೆ ಭಾವುಕ ಮಾತುಗಳನ್ನಾಡಿದ ಶಿವಣ್ಣ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿಧನದಿಂದ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಶಿವರಾಜ್​ಕುಮಾರ್​ ಅವರು ಹೇಳಿದರು.

    ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್​ಕುಮಾರ್​, ನನಗೆ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಕಳೆದವಾರವಷ್ಟೇ ಅವರ ಮನೆಗೆ ಭೇಟಿ, ಮಾತನಾಡಲು ಪ್ರಯತ್ನಿಸಿದ್ದೆ. ವಿನೋದ್​ ಜತೆಯಲ್ಲೂ ಮಾತನಾಡಿದ್ದೆ. ಆದರೆ, ಇಂದು ಅವರು ಅಗಲಿದ್ದಾರೆ. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

    ನಾವು ಯಾವಾಗಲೂ ವಿನೋದ್​ ಜತೆಯಲ್ಲಿ ಇರುತ್ತೇವೆ. ವಿನೋದ್​ಗೂ ಸಹ ಈ ಬಗ್ಗೆ ಹೇಳಿದ್ದೇನೆ. ವಿನೋದ್​ ಅವರು ತಮ್ಮ ತಾಯಿಯನ್ನು ತುಂಬಾ ಅಚ್ಚುಕೊಂಡಿದ್ದರು. ಅವರಿಬ್ಬರ ಬಾಂಧವ್ಯವೇ ಬೇರೆ ರೀತಿ ಇತ್ತು. ಎಂದಿಗೂ ತಾಯಿಯನ್ನು ಬಿಟ್ಟು ವಿನೋದ್​ ಇರಲಿಲ್ಲ. ಇದನೆಲ್ಲ ನೋಡಿದಾಗ ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ. ಮುಂದೆ ವಿನೋದ್​ ಹೇಗಿರುತ್ತಾರೆ ಎಂಬುದು ಚಿಂತೆಯಾಗಿದೆ. ವಿನೋದ್​ ಜತೆ ಮಾತನಾಡಿದ್ದೇನೆ. ಎಲ್ಲ ಕಾರ್ಯ ಮುಗಿಯಲಿ, ನಂತರ ವಿನೋದ್​ರನ್ನು ಒಮ್ಮೆ ಭೇಟಿ ನೀಡಿ ಮಾತನಾಡುತ್ತೇನೆ ಎಂದು ನಟ ಶಿವರಾಜ್​ಕುಮಾರ್​ ಅವರು ಹೇಳಿದರು.

    ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾಗಿದ್ದಾರೆ. ಲೀಲಾವತಿ ಅವರು ಇರುವರೆಗೂ ಅವರಿಗಾಗಿಯೇ ಪ್ರತಿಕ್ಷಣ ಬದುಕಿದ್ದ ಪುತ್ರ ವಿನೋದ್​ ರಾಜ್​ ಅವರನ್ನು ಅಗಲಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ.

    ಕಳೆದ ಕೆಲವು ತಿಂಗಳುಗಳಿಂದ ಲೀಲಾವತಿ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹಾಸಿಗೆ ಹಿಡಿದಿದ್ದರು. ನಟ ಶಿವರಾಜ್​ ಕುಮಾರ್​, ನಟ ದರ್ಶನ್​, ದೊಡ್ಡಣ, ಅರ್ಜುನ್​ ಸರ್ಜಾ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್​ ಸೇರಿದಂತೆ ಚಿತ್ರರಂಗದ ಗಣ್ಯರು ನೆಲಮಂಗಲದಲ್ಲಿರುವ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚೆಗಷ್ಟೇ ಲೀಲಾವತಿ ಅವರ ಕನಸಿನ ಪಶುವೈದ್ಯಕೀಯ ಆಸ್ಪತ್ರೆಯನ್ನು ಡಿಸಿಎಂ ಡಿಕೆಶಿ ಅವರು ಉದ್ಘಾಟನೆ ಮಾಡಿದ್ದರು.

    1938ರಲ್ಲಿ ಲೀಲಾ ಕಿರಣ್​ ಆಗಿ ಜನಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಲೀಲಾವತಿಯಾಗಿ ಗುರುತಿಸಿಕೊಂಡ ಕನ್ನಡಿಗರ ನೆಚ್ಚಿನ ಲೀಲಮ್ಮ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. 50 ವರ್ಷದ ವೃತ್ತಿ ಜೀವನದಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡವೊಂದರಲ್ಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.

    ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಾಂ ಸಿನಿಮಾಗಳಲ್ಲಿನ ಅವರ ಅಭಿನಯ ಎಂದಿಗೂ ಮರೆಯುವಂತಿಲ್ಲ. ಇದಿಷ್ಟೇ ಅಲ್ಲದೆ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 70 ದಶಕದಲ್ಲಿ ಮುಂಚೂಣಿ ನಾಯಕಿಯರಲ್ಲಿ ಲೀಲಾವತಿ ಕೂಡ ಒಬ್ಬರಾಗಿದ್ದರು.

    Breaking News| ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ

    ಅಮ್ಮನ ಅಗಲಿಕೆಯಿಂದ ಒಬ್ಬಂಟಿಯಾದ ವಿನೋದ್​ ರಾಜ್​… ಶನಿವಾರ ನೆಲಮಂಗಲದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts