More

    ಸಂಚಾರ ನಿಯಮವನ್ನೇ ಮರೆತ ‘ಸಂಚಾರಿ ವಿಜಯ್’!; ಕಂಟಕವಾಯ್ತು ಹೆಲ್ಮೆಟ್ ಇಲ್ಲದ ಪ್ರಯಾಣ…

    ಬೆಂಗಳೂರು: ನಟ ಸಂಚಾರಿ ವಿಜಯ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ಅವಘಡಕ್ಕೆ ಹೆಲ್ಮೆಟ್ ಹಾಕದೇ ಪ್ರಯಾಣ ಬೆಳೆಸಿದ್ದೆ ಕಾರಣ ಎಂದು ಹೇಳಲಾಗುತ್ತಿದೆ. ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್​ಗೆ ಮೆದುಳಿನ ಭಾಗಕ್ಕೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

    ಇದನ್ನೂ ಓದಿ: ಹಾಸಿಗೆಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮೊದಲ ಪತ್ನಿಯ ಶಾಕಿಂಗ್‌ ನ್ಯೂಸ್‌ ಬಿಚ್ಚಿಟ್ಟ ರಾಜ್‌ ಕುಂದ್ರಾ

    ಬೆಂಗಳೂರಿನಲ್ಲಿ ಸವಾರ ಮತ್ತು ಹಿಂಬದಿ ಸವಾರ ಇಬ್ಬರಿಗೂ ಹೆಲ್ಮೆಟ್​ ಧರಿಸುವುದು ಕಡ್ಡಾಯ ನಿಯಮವಿದೆ. ಅದರ ನಡುವೆಯೂ ಲಾಕ್​ಡೌನ್​ ಸಹ ಘೋಷಣೆ ಆಗಿದ್ದರಿಂದ ರಾತ್ರಿ ಹೊತ್ತು ಮನೆಯಿಂದ ಹೊರಬರದಂತೆ ಸರ್ಕಾರದ ಘೋಷಣೆ ಸಹ ಮಾಡಿತ್ತು. ಆದರೆ, ಇದ್ಯಾವುದನ್ನು ಗಮನಿಸಿದೆ, ಜೆಪಿ ನಗರದ 7ನೇ ಫೇಸ್ ಬಳಿ ಸ್ನೇಹಿತನ ಜತೆಗೆ ಹಿಂಬದಿಯಲ್ಲಿ ಹೆಲ್ಮೆಟ್​ ಧರಿಸದೇ ಕುಳಿತು ಪ್ರಯಾಣಿಸಿದ್ದಾರೆ.

    ಅಂದಹಾಗೆ, ಜೆಪಿ ನಗರದಲ್ಲಿನ ಸ್ನೇಹಿತ ನವೀನ್ ಅಪಾರ್ಟ್ಮೆಂಟ್ ನಿಂದ ಬೈಕ್ ನಲ್ಲಿ ಇಬ್ಬರೂ ಒಟ್ಟಿಗೆ ಒಂದೇ ಬೈಕ್​ನಲ್ಲಿ ಹೆಲ್ಮೆಟ್ ಬಳಸದೆ ಪ್ರಯಾಣಿಸಿದ್ದಾರೆ. ಕೂಗಳತೆ ದೂರದಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್​ನಿಂದ ಹಾರಿಬಿದ್ದ ಪರಿಣಾಮ ವಿಜಯ್ ತಲೆಗೆ ತೀವ್ರ ಗಾಯವಾದರೆ, ನವೀನ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸ್ಥಳೀಯರ ಸಹಾಯದಿಂದ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

    ಆಸ್ಪತ್ರೆ ವೈದ್ಯರೂ ಸಹ ಸಂಚಾರಿ ವಿಜಯ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಲಗಾಲಿನ ತೊಡೆಯ ಮೂಳೆ ಮುರಿದಿದೆ. ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ತ್ರಾವವಾಗಿದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿ, ಐಸಿಯುನಲ್ಲಿ ಇರಿಸಲಾಗಿದೆ. ಮುಂದಿನ 48 ಗಂಟೆ ಏನೂ ಹೇಳಲು ಸಾಧ್ಯವಿಲ್ಲ ಎಂದು ನ್ಯೂರೋ ಸರ್ಜನ್ ಅರುಣ್ ನಾಯಕ್ ತಿಳಿಸಿದ್ದಾರೆ. ಈ ಸಂಬಂಧ ಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಹ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts