More

    ಲಂಡನ್​ನ ಡಾನ್ಸ್​ ಸ್ಕೂಲ್​ಗೆ ಪ್ರವೇಶ ಪಡೆದ ಮೊದಲ ಭಾರತೀಯನಿಗೆ ಹೃತಿಕ್​ ರೋಷನ್​ ಮಾಡಿದ್ದೇನು?

    ಮುಂಬೈ: ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿ ಮಾಡಿಯೇ ಇತ್ತೀಚೆಗೆ ನಟ ಸೋನು ಸೂದ್ ಬಹಳಷ್ಟು ಸಲ ಗಮನ ಸೆಳೆದಿದ್ದಾರೆ. ಇದೀಗ ಆ ಸರದಿ ನಟ ಹೃತಿಕ್​ ರೋಷನ್​ ಅವರದ್ದು. ಬಾಲಿವುಡ್​ ನಟ ಹೃತಿಕ್​ ರೋಷನ್​ ಆಟೋ ಚಾಲಕನೊಬ್ಬನ ಮಗನ ಕನಸನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಮಾತ್ರವಲ್ಲ ತಮ್ಮ ಈ ನಡೆಯಿಂದ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

    ದೆಹಲಿಯ ವಿಕಾಸಪುರಿ ನಿವಾಸಿ, 20 ವರ್ಷದ ಯುವಕ ಕಮಲ್​ ಸಿಂಗ್ ಬ್ಯಾಲೆಟ್​ ಡಾನ್ಸರ್ ಆಗಿದ್ದು, ಇಂಗ್ಲೆಂಡ್​ನಲ್ಲಿನ ಪ್ರತಿಷ್ಠಿತ ಇಂಗ್ಲಿಷ್​ ನ್ಯಾಷನಲ್ ಬ್ಯಾಲೆಟ್ ಸ್ಕೂಲ್​ ಆಫ್ ಲಂಡನ್​ಗೆ ಪ್ರವೇಶಾವಕಾಶ ಪಡೆದ ಮೊದಲ ಭಾರತೀಯ ಡಾನ್ಸರ್​ ಎನಿಸಿಕೊಂಡಿದ್ದಾನೆ.

    ಆದರೆ ಅಲ್ಲಿಗೆ ಪ್ರವೇಶ ಪಡೆಯಲು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಕಮಲ್ ಸಿಂಗ್ ಫಂಡರೈಸರ್ ಮೂಲಕ ಮನವಿ ಮಾಡಿಕೊಂಡಿದ್ದು ಹೃತಿಕ್​ ರೋಷನ್​ ಗಮನಕ್ಕೆ ಬಂದಿದೆ. ಕಮಲ್ ಸಿಂಗ್​ಗೆ ಅಲ್ಲಿಗೆ ಪ್ರವೇಶ ಪಡೆಯಲು 15 ಲಕ್ಷ ರೂ. ಅಗತ್ಯವಿದ್ದು, 3 ಲಕ್ಷ ರೂ. ಕೊರತೆ ಇದ್ದಾಗ ಹೃತಿಕ್​ ರೋಷನ್​ 3 ಲಕ್ಷ ರೂ. ನೀಡಿ ನೆರವಾಗಿದ್ದಾರೆ. ನಟನ ಈ ನೆರವಾಗಿ ಕಮಲ್​ ಸಿಂಗ್ ತಂದೆ ಹಾಗೂ ಟೀಚರ್​ ಇಬ್ಬರೂ ಧನ್ಯವಾದ ತಿಳಿಸಿ ಮೆಚ್ಚುಗೆ ಸೂಚಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts