More

    ಖ್ಯಾತ ನಟನಿಗೆ ಕ್ಯಾನ್ಸರ್​, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..

    ಬೆಂಗಳೂರು: ಕೆಲವೊಮ್ಮೆ ಎಂಥ ಸಂಕಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಕೂಡ ಒಂದು ನಿದರ್ಶನ. ಕನ್ನಡದ ಖ್ಯಾತನಟ, ದಶಕಗಳಿಂದ ಅಭಿನಯವನ್ನೇ ನಂಬಿಕೊಂಡಿರುವ ಕಲಾವಿದರೊಬ್ಬರು ಕ್ಯಾನ್ಸರ್​ಗೆ ತುತ್ತಾಗಿದ್ದು, ಆರ್ಥಿಕ ನೆರವಿಗಾಗಿ ಸಾರ್ವಜನಿಕರಲ್ಲಿ ಕೇಳುವ ಅನಿವಾರ್ಯತೆ ಎದುರಾಗಿದೆ.

    ‘ಓಂ’ ಸಿನಿಮಾದಲ್ಲಿ ಡಾನ್ ರೈ ಪಾತ್ರದಲ್ಲಿ ನಟಿಸಿ ಗುರುತಿಸಿಕೊಂಡ ನಟ ಹರೀಶ್, ಹರೀಶ್​ ರಾಯ್​ ಎಂದೇ ಖ್ಯಾತಿ ಪಡೆದರು. ಆನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಕೆಜಿಎಫ್​-2 ಮತ್ತು ಅದಕ್ಕೂ ಮೊದಲು ಕೆಜಿಎಫ್​-1ರಲ್ಲೂ ಅಭಿನಯಿಸಿ ಗಮನ ಸೆಳೆದಿದ್ದ ಇವರು ಇದೀಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ.

    ದುಬಾರಿ ಚಿಕಿತ್ಸೆ ಖರ್ಚು ಭರಿಸಲಾಗದೆ ಸರ್ಕಾರಿ ಆಸ್ಪತ್ರೆ ಕಿದ್ವಾಯಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಅದಾಗ್ಯೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಚಿಕಿತ್ಸೆಗೆ ಬೇಕಾಗಿದೆ. ಕಷ್ಟ ಹೇಳಿಕೊಂಡರೆ ಎಲ್ಲಿ ತಪ್ಪು ಸಂದೇಶಗಳು ಹರಡಿ ಅವಕಾಶಗಳು ತಪ್ಪಿ ಹೋಗಬಹುದೋ ಎಂಬ ಆತಂಕದಿಂದ ಸುಮ್ಮನಿದ್ದ ಇವರ ಪರಿಸ್ಥಿತಿ ಬಳಿಕ ಅದೇ ಕಾರಣಕ್ಕೆ ಉಲ್ಬಣಗೊಂಡಿದ್ದು, ಹೆಚ್ಚಿನ ನಿಗಾ ವಹಿಸಲೇಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ಅನಾರೋಗ್ಯದ ಜತೆಗೆ ಮಕ್ಕಳಿಬ್ಬರ ಭವಿಷ್ಯ, ಕುಟುಂಬದ ಕುರಿತು ಚಿಂತೆಗೊಳಗಾಗಿರುವ ಇವರು ಇನ್ನೊಂದೆಡೆ ಹಣಕಾಸಿನ ಮುಗ್ಗಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಹಣಕಾಸು ನೆರವು ಕೇಳುವಂತಾಗಿದೆ.

    ಇವರ ಪರಿಸ್ಥಿತಿಯ ಬಗ್ಗೆ ಮರುಗಿ ನಟ ಅನಿರುದ್ಧ, ನಿರ್ದೇಶಕ ರವಿ ಶ್ರೀವತ್ಸ ಮುಂತಾದವರು ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹಂಚಿಕೊಂಡು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನೆರವಾಗಲು ಬಯಸುವವರು ಅವರಿಗೆ ಧನಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ.

    • ಗೂಗಲ್ ಪೇ/ ಫೋನ್​ ಪೇ: 9606960656
    • ಖಾತೆ ವಿವರ: Harish Roy, ಖಾತೆ ಸಂಖ್ಯೆ: 38510865963, ಐಎಫ್​ಎಸ್​ಸಿ: SBIN0004408

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts