More

    ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು; ಗೋವಾದಿಂದ ಬೆಂಗಳೂರಿಗೆ ಏರ್​ಲಿಫ್ಟ್

    ಸ್ಯಾಂಡಲ್​ವುಡ್​​ ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದ್ದು, ಗೋವಾದ ಸಮುದ್ರ ತಟದಲ್ಲಿ ಸೊಮರ್‌ಸಾಲ್ಟ್ ಹೊಡೆಯುವ ವೇಳೆ ಈ ದುರ್ಘಟನೆ ನಡೆದಿದೆ.

    ಕುಟುಂಬದ ಜತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದಿಗಂತ್ ಸೊಮರ್‌ಸಾಲ್ಟ್ ಹೊಡೆಯುವ ವೇಳೆ ಈ ಘಟನೆ ನಡೆದಿದೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸದ್ಯ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

    ಕೆಲವೇ ಗಂಟೆಗಳಲ್ಲಿ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ. ದೂದ್‌ಪೇಡಾ ದಿಗಂತ್ ಎಂದೇ ಹೆಸರುವಾಸಿಯಾಗಿರುವ ನಟ ದಿಗಂತ್ ತಮ್ಮ ನಟನೆಯಿಂದಲೇ ಹೆಸರುವಾಸಿಯಾದವರು.

    ಹಿಂದೊಮ್ಮೆ ಕಣ್ಣಿಗೆ ಗಾಯಮಾಡಿಕೊಂಡಿದ್ದ ದಿಗಂತ್: ‘ವೆಡ್ಡಿಂಗ್ ಪುಲಾವ್’ ಎಂಬ ಹಿಂದಿ ಚಿತ್ರದ ಬಳಿಕ ದಿಗಂತ್ ಕೈಗೆತ್ತಿಕೊಂಡ ಇನ್ನೊಂದು ಸಿನಿಮಾ ‘ಟಿಕೆಟ್ ಟು ಬಾಲಿವುಡ್’. ಈ ಚಿತ್ರದ ಶೂಟಿಂಗ್ ವೇಳೆ ನಾಯಕಿ ಎಸೆದ ಚೂರಿ ದಿಗಂತ್ ಕಣ್ಣಿಗೆ ಬಿದ್ದ ಪರಿಣಾಮ ದೃಷ್ಟಿ ಕಳೆದುಕೊಂಡರು ಎಂಬ ಸುದ್ದಿ ಹೊರಬಿದ್ದಿತ್ತು. ಮೂರ್ನಾಲ್ಕು ಬಾರಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ, ಕಣ್ಣು ಮೊದಲಿನಿಂತೆ ಸ್ಪಷ್ಟವಾಗಿ ಕಾಣಿಸಲ್ಲ ಎಂದು ಸುದ್ದಿಗಳು ವರದಿಯಾದವು. ಆದ್ರೆ, ಇದು ಸತ್ಯವಾಗಿರಲಿಲ್ಲ.

    ದೃಷ್ಟಿ ಕಳೆದುಕೊಂಡರು ಎಂಬ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದ ದಿಗಂತ್ ಚಿತ್ರೀಕರಣ ವೇಳೆ ಕಣ್ಣಿಗೆ ಪೆಟ್ಟು ಬಿದ್ದಿದ್ದು ನಿಜ, ಆದ್ರೆ ನಾಯಕಿ ಎಸೆದಿದ್ದು ಚೂರಿ ಅಲ್ಲ, ಹೈ ಹೀಲ್ಡ್ ಚಪ್ಪಲಿ. ಅದು ಅಕಸ್ಮಾತ್ ಆಗಿ ಎಸೆದಿದ್ದು. ಕಣ್ಣು ಗುಡ್ಡೆಗೆ ಗಾಯವಾಗಿದೆ, ದೃಷ್ಟಿ ಕಳೆದುಕೊಂಡಿಲ್ಲ, ಚಿಕಿತ್ಸೆ ಪಡೆಯುತ್ತಿದ್ದೇನೆ. ಸ್ವಲ್ಪ ದಿನ ವಿಶ್ರಾಂತಿ ಬೇಕು. ಪೂರ್ಣವಾಗಿ ದೃಷ್ಟಿ ಕಾಣಿಸುತ್ತೆ. ಭವಿಷ್ಯದಲ್ಲಿ ಏನೂ ತೊಂದರೆ ಇರುವುದಿಲ್ಲ ಎಂದು ದಿಗಂತ್ ಹೇಳಿದ್ದರು.

    ಏನಿದು ಸೊಮರ್‌ಸಾಲ್ಟ್?: ಸೊಮರ್‌ಸಾಲ್ಟ್ (ತಲೆಕೆಳಗಾಗಿ ಹಾರುವ ಸಾಹಸ) ಎನ್ನುವುದು ಮನುಷ್ಯನ ದೇಹವನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ತಲೆ ಕೆಳಗಾಗಿ ಪಲ್ಟಿ ಹೊಡೆಯುವುದೇ ಸೊಮರ್‌ಸಾಲ್ಟ್ ಅಥವಾ ಬ್ಯಾಕ್ ಫ್ಲಿಪ್ ಜಂಪ್ ಎನ್ನುತ್ತಾರೆ. ಸಾಮಾನ್ಯವಾಗಿ ಇದನ್ನು ಸಾಹಸಿಗಳು, ದೈಹಿಕ ಕಸರತ್ತು ಮಾಡುವವರು, ಕ್ರೀಡಾಪಟುಗಳು ಮಾಡುತ್ತಾರೆ. ಗೋಲ್ ಹೊಡೆದ ಬಳಿಕ ಕೆಲ ಫುಟ್ಬಾಲ್ ಆಟಗಾರರು ಈ ರೀತಿ ಜಂಪ್ ಮಾಡುವ ಸಾಹಸಕ್ಕೆ ಮುಂದಾಗುತ್ತಾರೆ. ತರಬೇತಿ ಪಡೆದು ಈ ಸಾಹಸ ಮಾಡಬೇಕು ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ. ಇದೇ ರೀತಿ ಈ ಸಾಹಸ ಜಂಪ್ ಮಾಡಲು ಹೋಗಿ ಹಲವಾರು ಕ್ರೀಡಾಪಟುಗಳು ಪ್ರಾಣ ಕಳೆದುಕೊಂಡಿದ್ದಾರೆ.

    ಶಾಸಕ ರಾಮದಾಸ್​​ ಬೆನ್ನಿಗೆ ಪ್ರೀತಿಯಿಂದ ಗುದ್ದಿದ ಪಿಎಂ

    ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ಧಾರಾವಾಹಿ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts