More

    ಹೊಸಬರನ್ನು ಕರೆತರುವುದು ಕಾರ್ಯಕರ್ತರ ಹೊಣೆಗಾರಿಕೆ: ಶಾಸಕ ತಿಪ್ಪಾರೆಡ್ಡಿ ಅನಿಸಿಕೆ

    ಚಿತ್ರದುರ್ಗ: ಪಕ್ಷಕ್ಕೆ ಹೊಸ ಕಾರ್ಯಕರ್ತರನ್ನು ಜೋಡಿಸುವ ಹೊಣೆ ಕಾರ್ಯಕರ್ತರು, ಮುಖಂಡರು ಹಾಗೂ ಪಕ್ಷದ ಜನಪ್ರತಿನಿಧಿಗಳ ಮೇಲಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ನಗರ ಮಂಡಲ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ಅಧಿಕಾರಕ್ಕಿಂತ ಸಂಘಟನೆ ಮತ್ತು ಜನರ ಸೇವೆ ಮುಖ್ಯವೆಂದು ಭಾವಿಸಿದೆ ಎಂದರು.

    ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಪಕ್ಷದ ಪದಾಧಿಕಾರಿಗಳು ಆಗುವುದೆಂದರೆ ಅದು ಅಧಿಕಾರವಲ್ಲ, ಹೊಣೆಗಾರಿಕೆ ಎಂಬುದು ಅರಿತು ಸಂಘಟನೆಗೆ ಶ್ರಮಿಸಬೇಕು ಎಂದು ಹೇಳಿದರು.

    ನಗರ ಮಂಡಲ ನೂತನ ಅಧ್ಯಕ್ಷ ಚಾಲುಕ್ಯ ನವೀನ್ ಮಾತನಾಡಿ, ನಿಷ್ಠೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

    ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೇಷ್ಠ ಪಡಿವಾಳ್, ನಗರಸಭೆ ಉಪಾಧ್ಯಕ್ಷೆ ಅನುರಾಧಾ ರವಿಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಸಂಪತ್‌ಕುಮಾರ್, ಚಂದ್ರಿಕಾ ಲೋಕನಾಥ್, ರೇಖಾ, ಶಶಿಧರ್, ಕಿರಣ್, ನಾಗರಾಜ್ ಬೇದ್ರೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts